Mobiles Gadgets Tablets Laptops TV Movies Automobile General

Vivo Y300 GT – ಬಜೆಟ್ ಬೆಲೆಗೆ ಪ್ರೀಮಿಯಂ ಫೀಚರ್‌ಗಳು!

Published On: May 26, 2025 7:03 pm
Vivo Y300 GT
Google News
Follow Us

Vivo Y300 GT: Vivo ತನ್ನ Y ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ Vivo Y300 GT ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಹಲವು ಆಕರ್ಷಕ ಫೀಚರ್‌ಗಳನ್ನು ಹೊಂದಿದೆ. ವಿವೋ Y300 GT ಪೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 8 ಸರಣಿಯ ಚಿಪ್‌ಸೆಟ್ ಅನ್ನು ಹೊಂದಿದೆ. ಹಾಗೆ ಇದರಲ್ಲಿ 90W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 7620mAh ಬ್ಯಾಟರಿ ಸಮರ್ತ್ಯವನ್ನು ಪಡೆದುಕೊಂಡಿದೆ. ಹಾಗಿದ್ದರೆ ಈ ಹೊಸ Vivo ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಇತರ ವಿಶೇಷತೆಗಳ ಬಗ್ಗೆ ವಿವರವಾಗಿ ತಿಳಿಯೋಣ.

Vivo Y300 GT ಬೆಲೆ

ವಿವೋ Y300 GT ಫೋನ್ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕೆ 1899 ಯುವಾನ್ (ಅಂದಾಜು ರೂ. 22,500) ಆಗಿದೆ. ಹಾಗೆ 12GB RAM ಮತ್ತು 512GB storage ಬೆಲೆ 2399 ಯುವಾನ್ (ಅಂದಾಜು ರೂ 28,500) ಆಗಿರುತ್ತದೆ. ಕಂಪನಿಯು ಸ್ಟ್ರೋಮ್ ಪರ್ಪಲ್, ಬ್ಲ್ಯಾಕ್ ಕ್ರಿಸ್ಟಲ್‌ನಂತಹ ಹಲವು ಬಣ್ಣಗಳಲ್ಲಿ ಫೋನ್ ಅನ್ನು ಪರಿಚಯಿಸಿದೆ.

Vivo Y300 GT ವಿಶೇಷಣಗಳು

8

ಡಿಸ್ಪ್ಲೇ: Vivo Y300 GT 6.78 ಇಂಚಿನ AMOLED ಫ್ಲಾಟ್ ಡಿಸೈನ್ ಡಿಸ್ಪ್ಲೇ ಹೊಂದಿದೆ. ಇದು 144Hz ರಿಫ್ರೆಶ್ ದರದ ಜೊತೆಗೆ 452PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದರಲ್ಲಿ 5,500 ನಿಟ್ಸ್ ಗರಿಷ್ಠ ಹೊಳಪು ಮತ್ತು HDR10+ ಬೆಂಬಲವು ಸೂರ್ಯನ ಬೆಳಕಿನಲ್ಲಿಯೂ ಸಹ ಸ್ಪಷ್ಟ ಗೋಚರತೆಯನ್ನು ಒದಗಿಸುತ್ತದೆ. ವಿಶೇಷವಾಗಿ ಈ ವಿವೊ ಫೋನ್ ಕಣ್ಣಿನ ರಕ್ಷಣೆಗಾಗಿ ಫಲಕವು SGS ಪ್ರಮಾಣೀಕರಿಸಲ್ಪಟ್ಟಿದೆ. 

ಕಾರ್ಯಕ್ಷಮತೆ: ಈ ವಿವೋ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಗೇಮಿಂಗ್ ಮತ್ತು ಮಲ್ಟಿ-ಟಾಸ್ಕಿಂಗ್ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ.  12GB ಯ LPDDR5 RAM ಮತ್ತು 512GB ವರೆಗಿನ UFS 3.1 ಸಂಗ್ರಹಣೆಯೊಂದಿಗೆ ಬರುತ್ತದೆ. ಈ ವಿವೋ ಪೋನಿನಲ್ಲಿ Android 15-ಆಧಾರಿತ OriginOS 5 ನಲ್ಲಿ ಕೆಲಸ ನಿರ್ವಹಿಸುತ್ತದ. 

ಕ್ಯಾಮೆರಾ: ವಿವೋ Y300 GT ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂಭಾಗವು 50MP ಸೋನಿ LYT-600 ಮುಖ್ಯ ಸಂವೇದಕವನ್ನು ಹೊಂದಿದೆ. ಇದು 2MP ಡೆಪ್ತ್ ಸೆನ್ಸರ್  ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳಿಗಾಗಿ, ಫೋನ್ 16MP ಕ್ಯಾಮೆರಾದೊಂದಿಗೆ ಬರುತ್ತದೆ. ಇದರಿಂದಾಗಿ ಇದು ಸೆಲ್ಫಿ ಪ್ರಿಯರಿಗೆ ಮತ್ತು ವೀಡಿಯೊ ಕರೆ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್: ಫೋನ್‌ನ ದೊಡ್ಡ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿ 7620mAh ಆಗಿದೆ. ಇದು ವಿವೋ ಫೋನ್‌ನಲ್ಲಿ ಇದುವರೆಗಿನ ಅತಿದೊಡ್ಡ ಬ್ಯಾಟರಿಯಾಗಿದೆ. ಜೊತೆಗೆ 90W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಸಹ ಒದಗಿಸಿದೆ. 

ಇತರ ವೈಶಿಷ್ಟ್ಯಗಳು: ಇನ್‌ಫ್ರಾರೆಡ್ ಬ್ಲಾಸ್ಟರ್, ಡ್ಯುಯಲ್ ಫ್ರೀಕ್ವೆನ್ಸಿ ಜಿಪಿಎಸ್, ಟ್ರಿಪಲ್ ಫ್ರೀಕ್ವೆನ್ಸಿ ಬೀಡೌ, ಎನ್‌ಎಫ್‌ಸಿ, ವೆಟ್ ಹ್ಯಾಂಡ್ ಟಚ್ ಮತ್ತು ಧೂಳಿನ ಪ್ರತಿರೋಧಕ್ಕಾಗಿ IP65 ರೇಟಿಂಗ್‌ನೊಂದಿಗೆ ಬರುತ್ತದೆ.

ಕನೆಕ್ಟಿವಿಟಿ ಫೀಚರ್:  Y300 GT ಪೋನಿನಲ್ಲಿ 5G, Wi-Fi 6, ಬ್ಲೂಟೂತ್ 6.0, NFC, ಮತ್ತು USB ಟೈಪ್-C 2.0 ನಂತಹ  ಹಲವಾರು ಸಂಪರ್ಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Pallavi N

My name is Pallavi N. I am an experienced content writer. Currently I am writing high quality and seo friendly content about various mobiles and gadgets on Qntechhub.

WhatsApp Channel

Join Now

Telegram Channel

Join Now