ಮೋಹನ್ ಲಾಲ್ ಮತ್ತು ಶೋಭನಾ ನಟಿಸಿರುವ Thudarum ಮಲಯಾಳಂ ಚಿತ್ರವು ಏಪ್ರಿಲ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದೀಗ ಥುಡರಮ್ ಚಿತ್ರವು ಅಪರಾಧ ಅಂಶಗಳ ಜೊತೆಗೆ ಕೌಟುಂಬಿಕ ನಾಟಕ ಮತ್ತು ಸಸ್ಪೆನ್ಸ್ನ ಮಿಶ್ರಣದಿಂದಾಗಿ ಪ್ರೇಕ್ಷಕರ ಮನರಂಜಿಸಲು OTT ಗೆ ಬರುತ್ತಿದೆ.
Thudarum OTT ಬಿಡುಗಡೆ ದಿನಾಂಕ
ಮೋಹನ್ ಲಾಲ್ ಮತ್ತು ಶೋಭನಾ ನಟಿಸಿರುವ ಮಲಯಾಳಂ ಚಿತ್ರ ‘ಥುಡರಮ್ ‘ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ನಾಟಕವು ಮೇ 30 ರಿಂದ ಜಿಯೋಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಪ್ರಾರಂಭವಾಗಲಿದೆ. ಇದು ಮಲಯಾಳಂ, ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿರುತ್ತದೆ.
ಥುಡರಮ್ ಮಲಯಾಳಂ ಚಿತ್ರದಲ್ಲಿ ತಾರಾಗಣ
ಮೋಹನ್ ಲಾಲ್ ನಟಿಸಿರು ಚಿತ್ರ ರೆಜಪುತ್ರ ವಿಷುಯಲ್ ಮೀಡಿಯಾದ ಬ್ಯಾನರ್ ಅಡಿಯಲ್ಲಿ ಎಂ ರೆಂಜಿತ್ ಅವರು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಶೋಭನಾ, ಫರ್ಹಾನ್ ಫಾಸಿಲ್, ಮಣಿಯನ್ಪಿಳ್ಳ ರಾಜು, ಬಿನು ಪಪ್ಪು, ಇರ್ಷಾದ್ ಅಲಿ, ಆರ್ಷಾ ಚಾಂದಿನಿ ಬೈಜು, ಥಾಮಸ್ ಮ್ಯಾಥ್ಯೂ, ಕೃಷ್ಣ ಪ್ರಬಾ, ಪ್ರಕಾಶ್ ವರ್ಮ ಮತ್ತು ಅರವಿಂದ್ ರವರು ನಟಿಸಿದ್ದಾರೆ.
ಥುಡರಮ್ ಬಾಕ್ಸ ಆಫೀಸ್ ಕಲೆಕ್ಷನ್
ಥುಡರಮ್ ಚಲನಚಿತ್ರವು ಜಾಗತಿಕವಾಗಿ 230.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಸ್ಯಾಕ್ನಿಲ್ಕ್ ಪ್ರಕಾರ, ಮೊದಲ ವಾರ ಮಾತ್ರ ರೂ 51.4 ಕೋಟಿ ಗಳಿಸಿತು. ಎರಡನೇ ವಾರದಲ್ಲಿ ರೂ 35.35 ಕೋಟಿ ಮತ್ತು ಮೂರನೇ ವಾರದಲ್ಲಿ ರೂ 20.8 ಕೋಟಿ ಗಳಿಸಿದೆ.