ರಿಯಲ್‌ಮಿ ನಿಯೋ 7 ಟರ್ಬೋ (Realme Neo 7 Turbo) ಹೊಸ ತಂತ್ರಜ್ಞಾನ, ಶಕ್ತಿಶಾಲಿ ಬ್ಯಾಟರಿ, ಮತ್ತು ಆಧುನಿಕ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ 2025 ರಲ್ಲಿ ಚೀನಾದಲ್ಲಿ ಬಿಡುಗಡೆಗೊಂಡಿದೆ. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ನಡುವೆ ಪ್ರಬಲ ಸ್ಪರ್ಧೆಯನ್ನು ಉಂಟುಮಾಡಿದೆ. ಹಾಗಿದ್ದರೆ ಈ ಫೋನಿನ ವಿಶೇಷಣಗಳು ಮತ್ತು ಬೆಲೆಯ ಬಗ್ಗೆ ತಿಳಿದುಕೊಳೋಣ.
Realme Neo 7 Turbo ವಿಶೇಷಣಗಳು
Realme Neo 7 Turbo 6.78 ಇಂಚಿನ 1.5K LTPO AMOLED ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರ ಮತ್ತು 6500 ನಿಟ್ಸ್ ಪೀಕ್ ಬ್ರೈಟ್ನೆಸ್ ಅನ್ನು ಒದಗಿಸುತ್ತದೆ. ಇದು HDR10+ ಬೆಂಬಲದೊಂದಿಗೆ ಉತ್ತಮ ದೃಶ್ಯಾನುಭವವನ್ನು ನೀಡುತ್ತದೆ.
ರಿಯಲ್‌ಮಿ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9400e ಪ್ರೊಸೆಸರ್ ಮತ್ತು ಇಮ್ಮಾರ್ಟಲಿಸ್-G720 GPU ಸಹಿತ, ಈ ಫೋನ್ ಗೇಮಿಂಗ್ ಮತ್ತು ಬಹುಕಾರ್ಯ ನಿರ್ವಹಣೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ. ಈ ಫೋನ್ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಆಧಾರಿತ Realme UI 6.0 ನೊಂದಿಗೆ ಬರುತ್ತದೆ.
ಕ್ಯಾಮೆರಾ ಬಗ್ಗೆ ಹೇಳುವುದಾದರೆ, 50-ಮೆಗಾಪಿಕ್ಸೆಲ್ ಸೋನಿ IMX882 ಕ್ಯಾಮೆರಾ ಮತ್ತು ಮತ್ತು 8-ಮೆಗಾಪಿಕ್ಸೆಲ್ ಸೆಕೆಂಡರಿ ಅಲ್ಟ್ರಾ-ವೈಡ್-ಆಂಗಲ್ OV08D10 ಸಂವೇದಕವನ್ನು ಒಳಗೊಂಡಿದೆ. ಜೊತೆಗೆ ಫೋನ್ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ಸೆಟ್‌ಅಪ್ ಉತ್ತಮ ಫೋಟೋ ಮತ್ತು ವಿಡಿಯೋ ಅನುಭವವನ್ನು ಒದಗಿಸುತ್ತದೆ.
ರಿಯಲ್‌ಮಿ ನಿಯೋ 7 ಟರ್ಬೊ ಫೋನ್ 7200mAh ಬ್ಯಾಟರಿ 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ, ದೀರ್ಘಕಾಲಿಕ ಬಳಕೆಯನ್ನು ಖಚಿತಪಡಿಸುತ್ತದೆ. ಈ ಫೋನ್ ಅನ್ನು ಕೇವಲ 19 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜ್ ಮಾಡಬಹುದು
ಇತರ ವೈಶಿಷ್ಟ್ಯಗಳಲ್ಲಿ 5G, Wi-Fi, Bluetooth 5.4, NFC, GPS, ಎರಡು ಸ್ಪೀಕರ್‌ಗಳು ಮತ್ತು ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹಲವು ಸಂಪರ್ಕ ಆಯ್ಕೆ ಗಳನ್ನು ಹೊಂದಿರುತ್ತದೆ.
Realme Neo 7 Turbo ಬೆಲೆ
12GB + 256GB: CNY 1999 (ಸುಮಾರು ₹23,700)
16GB + 256GB: CNY 2,299 (ಸುಮಾರು ₹27,900)
12GB + 512GB: CNY 2,499 (ಸುಮಾರು ₹29,600)
16GB + 512GB: CNY 2,799 (ಸುಮಾರು ₹32,700)
ರಿಯಲ್‌ಮಿ ನಿಯೋ 7 ಟರ್ಬೊ ಚೀನಾದಲ್ಲಿ ಬಿಡುಗಡೆಯಾಗಿದೆ. ಇದು ಪಾರದರ್ಶಕ ಕಪ್ಪು ಮತ್ತು ಪಾರದರ್ಶಕ ಬೂದು ಬಣ್ಣಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಇದರ ಬಿಡುಗಡೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಯಿಲ್ಲ.