Realme GT 7T vs iQOO Neo 10: ರಿಯಲ್ಮಿ GT 7T ಮತ್ತು ಐಕ್ಯೂ ನಿಯೋ 10 ಫ್ಲಾಗ್ಶಿಪ್ ಫೋನ್ಗಳು 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿದೆ. ಎರಡು ಫೋನ್ಗಳೂ ಉತ್ತಮವಾದ ಪರ್ಫಾರ್ಮೆನ್ಸ್, ಫಾಸ್ಟ್ ಚಾರ್ಜಿಂಗ್ ಮತ್ತು ಆಕರ್ಷಕ ಡಿಸೈನಿನೊಂದಿಗೆ ಬಂದಿವೆ. ಈ ಲೇಖನದಲ್ಲಿ ನಾವು ಎರಡು ಫೋನ್ಗಳ ವಿಶಿಷ್ಟತೆಗಳನ್ನು ಹೋಲಿಸಿ, ಯಾವದು ನಿಮಗೆ ಸೂಕ್ತ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತೇವೆ.
Realme GT 7t vs iQOO Neo 10 ಬೆಲೆ
Realme GT 7T ಬೆಲೆಯ ಬಗ್ಗೆ ಮಾತನಾಡುತ್ತಾ, ಇದನ್ನು ಮೂರು ಶೇಖರಣಾ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 8GB + 256GB ಸ್ಟೋರೇಜ್ ರೂಪಾಂತರದ ಬೆಲೆ 34,999 ರೂ. ಹಾಗೆ 12GB + 256GB ಮಾದರಿಯ ಬೆಲೆ 37,999 ರೂ ಮತ್ತು 12GB + 512GB ಸ್ಟೋರೇಜ್ ನ ಬೆಲೆ 41,999 ರೂ ಆಗಿರುತ್ತದೆ.
iQOO ನಿಯೋ 10 ಸ್ಮಾರ್ಟ್ ಫೋನ್ 8GB + 128GB ರೂಪಾಂತರಕ್ಕೆ 31,999 ರೂ ಆಗಿದೆ. ಹಾಗೆ 8GB + 256GB ರೂಪಾಂತರದ ಬೆಲೆ 33,999 ರೂ ಆಗಿರುತ್ತದೆ. 12GB + 256GB ರೂಪಾಂತರಕ್ಕೆ 35,999 ರೂ. ಮತ್ತು 16GB + 512GB ರೂಪಾಂತರಕ್ಕೆ 40,999 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಡಿಸೈನ್ ಮತ್ತು ಡಿಸ್ಪ್ಲೇ ಗುಣಮಟ್ಟ
Realme GT 7T 6.8-ಇಂಚಿನ FHD+ AMOLED ಪರದೆಯನ್ನು ಹೊಂದಿದ್ದು, ಅದು 120Hz ರಿಫ್ರೆಶ್ ದರವನ್ನು ಪಡೆಯುತ್ತದೆ.
iQOO ನಿಯೋ 10 ಸ್ಮಾರ್ಟ್ಫೋನ್ನಲ್ಲಿ 6.78 ಇಂಚು 1.5K AMOLED ಡಿಸ್ಪ್ಲೇ ಇದೆ, ಜೊತೆಗೆ 144Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಇದು ಗೇಮಿಂಗ್ ಮತ್ತು ಸ್ಕ್ರೋಲಿಂಗ್ ಅನುಭವವನ್ನು ಮತ್ತಷ್ಟು ಸ್ಮೂತ್ ಆಗಿ ಮಾಡುತ್ತದೆ.
ಪರ್ಫಾರ್ಮೆನ್ಸ್ ಮತ್ತು ಗೇಮಿಂಗ್
ರಿಯಲ್ಮಿ GT 7T ಪೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಮ್ಯಾಕ್ಸ್ ಪ್ರೊಸೆಸರ್ ಬಳಸಲಾಗಿದೆ. ಇದು ದಿನನಿತ್ಯದ ಉಪಯೋಗಗಳಿಗೆ ಉತ್ತಮವಾಗಿದೆ.
ಐಕ್ಯೂ ನಿಯೋ 10 ನಲ್ಲಿ ಸ್ನಾಪ್ಡ್ರಾಗನ್ 8s Gen 4 ಇದೆ. ಇದು ಗೇಮಿಂಗ್ ಮತ್ತು ಬಹುಕಾರ್ಯಕದಲ್ಲಿ ಉತ್ತಮವಾಗಿ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು Q1 ಗ್ರಾಫಿಕ್ಸ್ ಚಿಪ್ನೊಂದಿಗೆ ಕೂಡ ಬರುತ್ತದೆ, ಇದು ಗೇಮಿಂಗ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ.
ಸಾಫ್ಟ್ವೇರ್ ಮತ್ತು ಅಪ್ಡೇಟ್ಸ್
ರಿಯಲ್ಮಿ GT 7T ನಲ್ಲಿ ರಿಯಲ್ಮೆ UI 6.0 ಮತ್ತು iQOO Neo 10 ನಲ್ಲಿ Funtouch OS 15 ಇದೆ. ಎರಡು ಫೋನ್ಗಳೂ Android 15 ಮೇಲೆ ಆಧಾರಿತವಾಗಿವೆ. ಈ ಎರಡು ಫೋನುಗಳು ಸಾಮಾನ್ಯವಾಗಿ 3 ವರ್ಷಗಳ OS ನವೀಕರಣಗಳು ಮತ್ತು 4 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ.
ಕ್ಯಾಮೆರಾ ಗುಣಮಟ್ಟ ಹೋಲಿಕೆ
ಎರಡು ಫೋನ್ಗಳಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಅದು 50MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದ್ದು, 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಸಹ ಹೊಂದಿವೆ.
ಜೊತೆಗೆ ಈ ರಿಯಲ್ಮಿ ಮತ್ತು ಐಕ್ಯೂ ಸ್ಮಾರ್ಟ್ ಫೋನ್ ಗಳಲ್ಲಿ ಮುಂಭಾಗದ ಕ್ಯಾಮೆರಾ 32MP ಕ್ಯಾಮರಾವನ್ನು ಹೊಂದಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್ಮಿ GT 7T ಮತ್ತು iQOO ಮೊಬೈಲ್ ನಲ್ಲಿ 7000mAh ಬ್ಯಾಟರಿ ಹೊಂದಿದೆ ಮತ್ತು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ದಿನಪೂರ್ತಿ ಉಪಯೋಗಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ.
ನೆಟ್ವರ್ಕ್ ಮತ್ತು ಇತರೆ ಫೀಚರ್ಸ್
GT 7T ಪೋನಿನಲ್ಲಿ ವೈ-ಫೈ 6, ಬ್ಲೂಟೂತ್ 6.0, NFC, USB-C, ಮತ್ತು 360° NFC ಗಳನ್ನು ಹೀಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ನಿಯೋ 10 ಇದರಲ್ಲಿ ವೈ-ಫೈ 7, ಬ್ಲೂಟೂತ್ 5.4, ಐಆರ್ ಬ್ಲಾಸ್ಟರ್, ಎನ್ಎಫ್ಸಿ ಮತ್ತು ಐಪಿ65 ರೇಟಿಂಗ್ ಹೊಂದಿದೆ.
Realme GT 7T vs iQOO Neo 10 – FAQ
1. iQOO ನಿಯೋ 10 ಗೇಮಿಂಗ್ಗೆ ಸೂಕ್ತವೇ?
ಹೌದು, ಸ್ನಾಪ್ಡ್ರಾಗನ್ 8s Gen 4 ಮತ್ತು Q1 ಗ್ರಾಫಿಕ್ಸ್ ಚಿಪ್ನಿಂದಾಗಿ ಇದು ಉತ್ತಮ ಗೇಮಿಂಗ್ ಅನುಭವವನ್ನು ನೀಡುತ್ತದೆ.
2. ರಿಯಲ್ಮಿ GT 7T ನಲ್ಲಿ ಕ್ಯಾಮೆರಾ ಗುಣಮಟ್ಟ ಹೇಗಿದೆ?
50MP ಮೆನ್ ಕ್ಯಾಮೆರಾ ಮತ್ತು 8MP ಅಲ್ಟ್ರಾ ವೈಡ್ ಲೆನ್ಸ್ಗಳಿಂದ ಉತ್ತಮ ಚಿತ್ರಗಳನ್ನು ಪಡೆಯಬಹುದು.
3. ಬ್ಯಾಟರಿ ಬ್ಯಾಕಪ್ ಹೇಗೆ?
ಇದಿಬ್ಬರೂ ಫೋನ್ಗಳು 7000mAh ಬ್ಯಾಟರಿಯನ್ನು ಹೊಂದಿದ್ದು, ದಿನಪೂರ್ತಿ ಉಪಯೋಗಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ.
4. ಡಿಸ್ಪ್ಲೇ ರಿಫ್ರೆಶ್ ರೇಟ್?
iQOO Neo 10 ನಲ್ಲಿ 144Hz ಮತ್ತು Realme GT 7T ನಲ್ಲಿ 120Hz ರಿಫ್ರೆಶ್ ರೇಟ್ ಇದೆ.
5. ಈ ಎರಡು ಫೋನ್ಗಳ ಬೆಲೆ ವ್ಯತ್ಯಾಸ?
iQOO Neo 10 ₹31,999 ರಿಂದ ಪ್ರಾರಂಭವಾಗುತ್ತದೆ, ಮತ್ತು Realme GT 7T ₹34,999 ರಿಂದ ಪ್ರಾರಂಭವಾಗುತ್ತದೆ.
ನೀವು ಯಾವ ಫೋನ್ಅನ್ನು ಆಯ್ಕೆ ಮಾಡ್ತೀರಾ?
ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಆಯ್ಕೆ ಮಾಡುವುದು ಉತ್ತಮ. ನೀವು ಅತ್ಯುತ್ತಮ ಕಾರ್ಯಕ್ಷಮತೆ, ಹೆಚ್ಚಿದ ಡಿಸ್ಪ್ಲೇ ರಿಫ್ರೆಶ್ ದರ (144Hz) ಮತ್ತು ಗೇಮಿಂಗ್ಗಾಗಿ ಸ್ನಾಪ್ಡ್ರಾಗನ್ 8s Gen 4 ಪ್ರೊಸೆಸರ್ ಬಯಸಿದರೆ iQOO Neo 10 ಉತ್ತಮ ಆಯ್ಕೆಯಾಗಿದೆ. ಜೊತೆಗೆ, ಇದು Q1 ಗೇಮಿಂಗ್ ಚಿಪ್ ಅನ್ನು ಹೊಂದಿದೆ, ಇದು ಗೇಮರುಗಳಿಗಾಗಿ ಸೂಕ್ತವಾಗಿದೆ.
ನೀವು ಉತ್ತಮ ಕ್ಯಾಮರಾ ಗುಣಮಟ್ಟ, ಹೆಚ್ಚಿನ ಸಂಗ್ರಹಣೆ ಆಯ್ಕೆಗಳು (512GB ವರೆಗೆ) ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ನೊಂದಿಗೆ ಸೊಗಸಾದ ವಿನ್ಯಾಸವನ್ನು ಬಯಸಿದರೆ Realme GT 7T ಉತ್ತಮ ಆಯ್ಕೆಯಾಗಿದೆ.