Mobiles Gadgets Tablets Laptops TV Movies Automobile General

OnePlus Pad Go ₹16,999 ಕ್ಕೆ ಲಾಂಚ್! – ಇದು Best Budget Tablet ಅಲ್ವಾ?

Published On: June 17, 2025 9:31 pm
OnePlus Pad Go
Google News
Follow Us

OnePlus ತನ್ನ ಬಜೆಟ್ ಸೆಗ್ಮೆಂಟ್‌ನಲ್ಲಿ ನೂತನ ಪ್ಯಾಡ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿತು – OnePlus Pad Go, ಕೆಲವೆಡೆ ಇದನ್ನು Pad Lite ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಪ್ರೀಮಿಯಂ ವಿನ್ಯಾಸ, 2.4K ರೆಸಲ್ಯೂಷನ್ ಡಿಸ್ಪ್ಲೇ, 8000mAh ಬ್ಯಾಟರಿ ಮತ್ತು ಡಾಲ್ಬಿ ಆಟ್ಮಾಸ್ ಸ್ಪೀಕರ್‌ಗಳಂತಹ ವಿಶೇಷತೆಗಳನ್ನು ಹೊಂದಿರುವ ಈ ಟ್ಯಾಬ್ಲೆಟ್ ₹16,999ರಿಂದ ಆರಂಭವಾಗುತ್ತದೆ. ವಿದ್ಯಾಥಿಗಳು, ಪ್ರೊಫೆಶನಲ್‌ಗಳು ಮತ್ತು ಮೀಡಿಯಾ ಲವರ್ಸ್ ಎಲ್ಲರಿಗೂ ಇದು ಬೆಲೆಗೆ ಹೆಚ್ಚು ಮೌಲ್ಯ ನೀಡುವ ಸಾಧನವಾಗಿದೆ. ಈ ಲೇಖನದಲ್ಲಿ Pad Go ಟ್ಯಾಬ್ಲೆಟ್‌ನ ಎಲ್ಲಾ ಪ್ರಮುಖ ಫೀಚರ್‌ಗಳು, ಬಗ್ಗೆ ವಿವರವಾಗಿ ತಿಳಿದುಕೊಳೋಣ.

OnePlus Pad Go ಲಾಂಚ್ & ವೇರಿಯಂಟ್‌ಗಳು

177OnePlus Pad Go (ಕೆಲವೆಡೆ “Pad Lite” ಎಂಬ ಹೆಸರಿನಿಂದ ಲಭ್ಯವಿದೆ) ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್‌ಗಳನ್ನು ನೀಡುತ್ತಿರುವ ಟ್ಯಾಬ್ಲೆಟ್ ಆಗಿದೆ. ಇದು ಟ್ವಿನ್ ಮಿಂಟ್ ಬಣ್ಣದಲ್ಲಿ ಲಭ್ಯವಿದ್ದು, ಈ ಕೆಳಗಿನ ಆವೃತ್ತಿಗಳಲ್ಲಿ ಬರುತ್ತದೆ:

8GB RAM + 128GB ಸ್ಟೋರೇಜ್ (Wi-Fi) – ₹19,999

8GB RAM + 128GB ಸ್ಟೋರೇಜ್ (LTE) – ₹21,999

8GB RAM + 256GB ಸ್ಟೋರೇಜ್ (LTE) – ₹23,999

ಇದಕ್ಕೆ ಕೆಲವು ಆಫರ್‌ಗಳಲ್ಲಿ ₹16,999 ರಷ್ಟು ಕಡಿಮೆ ಬೆಲೆಯಲ್ಲಿಯೂ ಲಭ್ಯವಿದೆ.

ಆಕರ್ಷಕ ವಿನ್ಯಾಸ ಮತ್ತು ಗರಿಷ್ಠ ದೃಷ್ಯ ಗುಣಮಟ್ಟ

OnePlus ತನ್ನ ಪ್ರೀಮಿಯಂ ಪ್ಯಾಡ್‌ನಲ್ಲಿ ಕಂಡಂತೆ ಸ್ಟೈಲಿಷ್ ವಿನ್ಯಾಸವನ್ನು ಈ ಟ್ಯಾಬ್ಲೆಟ್‌ನಲ್ಲೂ ಮುಂದುವರಿಸಿದೆ.

ತೂಕ: 532 ಗ್ರಾಂ ಮಾತ್ರ – ಪ್ರಯಾಣಕ್ಕೆ ಅನುಕೂಲ.

ಸ್ಕ್ರೀನ್: 11.35 ಇಂಚುಗಳ 2.4K ರೆಸಲ್ಯೂಷನ್ ಹೊಂದಿದ LTPS LCD ಪ್ಯಾನೆಲ್, 90Hz ರಿಫ್ರೆಶ್ ರೇಟ್ ಜೊತೆ.

ಇದು ಕ್ಲಿಯರ್ ವೀಕ್ಷಣೆ ಮತ್ತು ಮೃದುವಾದ ಅನುಭವ ನೀಡುತ್ತದೆ. ಕಣ್ಣಿಗೆ ಹಾನಿ ಆಗದಂತೆ Low Blue Light ಮತ್ತು Adaptive Brightness ಕೂಡ ಹೊಂದಿದೆ.

ಪ್ರೋಸೆಸರ್ ಮತ್ತು ಕಾರ್ಯಕ್ಷಮತೆ

ಈ ಟ್ಯಾಬ್ಲೆಟ್ ಮೀಡಿಯಾ ಟೆಕ್ ಹೆಲಿಯೊ G99 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 8GB RAM ಮತ್ತು 128GB ಅಥವಾ 256GB ಸ್ಟೋರೇಜ್ ಹೊಂದಿದೆ. microSD ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದಾಗಿದೆ.

ದೈನಂದಿನ ಬಳಕೆಗಾಗಿ – ವಿಡಿಯೋ ಸ್ಟ್ರೀಮಿಂಗ್, ಓದು, ಡಾಕ್ಯುಮೆಂಟ್ ಎಡಿಟಿಂಗ್ – ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

OxygenOS ಅನುಭವ

ಒನ್‌ಪ್ಲಸ್ ಪ್ಯಾಡ್ Go ನಲ್ಲಿ OxygenOS 13.2 (Android 13 ಆಧಾರಿತ) ಅನ್ನು ಬಳಸಲಾಗಿದೆ. ಟ್ಯಾಬ್ಲೆಟ್ ಗೆ ಅನುಕೂಲವಾದ ಫೀಚರ್‌ಗಳು – ಡಿವೈಸ್‌ಗಳ ನಡುವೆ clipboard sync, ಪೇಸ್ಟ್, ಫೈಲ್ ಶೇರ್ – ಸೌಲಭ್ಯವಿದೆ. ಒನ್‌ಪ್ಲಸ್ ಫೋನ್ ಬಳಕೆದಾರರಿಗೆ ತುಂಬಾ ಉಪಯುಕ್ತ.

ಬ್ಯಾಟರಿ ಮತ್ತು ಚಾರ್ಜಿಂಗ್

ಇದು 8000mAh ಬ್ಯಾಟರಿ ಇದರಲ್ಲಿ ಲಭ್ಯವಿದ್ದು, 33W SUPERVOOC ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಸಾದಾರಣ ಬಳಕೆಯಲ್ಲಿ ದಿನಪೂರ್ತಿ ಬ್ಯಾಟರಿ ಸೌಲಭ್ಯವಿದೆ. ಚುಟುಕು ಸಮಯದಲ್ಲಿ ಚಾರ್ಜ್ ಆಗುತ್ತದೆ.

ಕ್ಯಾಮೆರಾ, ಧ್ವನಿ ಮತ್ತು ಸಂಪರ್ಕ

ಮುಂಭಾಗ ಮತ್ತು ಹಿಂಭಾಗದಲ್ಲಿ 8MP ಕ್ಯಾಮೆರಾಗಳು ಲಭ್ಯವಿದ್ದು, ವಿಡಿಯೋ ಕರೆಗಳು ಮತ್ತು ಸಾಮಾನ್ಯ ಫೋಟೋಗೆ ಸೂಕ್ತವಾಗಿದೆ.

ಡಾಲ್ಬಿ ಆಟ್ಮಾಸ್‌ ಸ್ಪೀಕರ್‌ಗಳೊಂದಿಗೆ ನಾಲ್ಕು ಸ್ಪೀಕರ್‌ಗಳು ಇದರಲ್ಲಿ ಇದ್ದು, ಮಲ್ಟಿಮೀಡಿಯಾ ಅನುಭವವನ್ನು ಉತ್ತಮಗೊಳಿಸುತ್ತವೆ.

ಸಂಪರ್ಕಕ್ಕೆ Wi-Fi 5, ಬ್ಲೂಟೂತ್ 5.2 (aptX HD, LDAC), ಮತ್ತು LTE ಬೆಂಬಲವಿದೆ. ಆದರೆ SIM tray ಇಲ್ಲ. LTE ಕನೆಕ್ಷನ್ ಫೋನ್ ತಂತ್ರಜ್ಞಾನವನ್ನು ಆಧರಿಸಿದೆ.

OnePlus Pad ಮತ್ತು Pad Go ನಡುವಿನ ಬದಲಾವಣೆಗಳು

ಒನ್‌ಪ್ಲಸ್ ಪ್ಯಾಡ್ ₹37,999 ಬೆಲೆಯಲ್ಲಿ Dimensity 9000 ಪ್ರೋಸೆಸರ್ ಮತ್ತು ಹೆಚ್ಚು ಪವರ್‌ನೊಂದಿಗೆ ಬರುತ್ತದೆ. ಆದರೆ Pad Go ಕಡಿಮೆ ಬೆಲೆಯಲ್ಲಿ ದಿನಬಳಕೆಗೆ ಸಾಕಷ್ಟು ಶಕ್ತಿಶಾಲಿಯಾಗಿ ದೊರೆಯುತ್ತದೆ.

ಒನ್‌ಪ್ಲಸ್ ಪ್ಯಾಡ್ Go ಅಥವಾ Pad Lite ಟ್ಯಾಬ್ಲೆಟ್ ಮೀಡಿಯಾ ವೀಕ್ಷಣೆ, ಓದು, ನೋಟ್ಸ್, ಸಾದಾ ಕೆಲಸಗಳಿಗೆ ಅತ್ಯುತ್ತಮ ಆಯ್ಕೆ. ಇದು ಉತ್ತಮ ಡಿಸ್ಪ್ಲೇ, ಧ್ವನಿ, ಬ್ಯಾಟರಿ, ಹಾಗೂ ಒನ್‌ಪ್ಲಸ್ ಪ್ಯಾಡ್ ಫೋನ್‌ಗಳ ಜೋಡಣೆಯೊಂದಿಗೆ ಪ್ರೀಮಿಯಂ ಅನುಭವ ನೀಡುತ್ತದೆ. ₹16,999 ರಿಂದ ₹23,999 ವರೆಗೆ ಬಜೆಟ್‌ನಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ.

Pallavi N

My name is Pallavi N. I am an experienced content writer. Currently I am writing high quality and seo friendly content about various mobiles and gadgets on Qntechhub.

WhatsApp Channel

Join Now

Telegram Channel

Join Now