OnePlus 13S: OnePlus ತನ್ನ ಹೊಸ ಸ್ಮಾರ್ಟ್ಫೋನ್ OnePlus 13s ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಫೋನ್ ಒನ್ಪ್ಲಸ್ 13 ಸರಣಿಯ ಭಾಗವಾಗಿರುತ್ತದೆ ಮತ್ತು ಕೆಲವು ವಾರಗಳ ಹಿಂದೆ ಚೀನಾದಲ್ಲಿ ಬಿಡುಗಡೆಯಾದ ಒನ್ಪ್ಲಸ್ 13T ಯ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ನಂಬಲಾಗಿದೆ. ಈ ಮೊಬೈಲ್ ನಲ್ಲಿ AI ವೈಶಿಷ್ಟ್ಯಗಳು, ಶಕ್ತಿಯುತ ಕಾರ್ಯಕ್ಷಮತೆ ಮತ್ತು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.
OnePlus 13S ಭಾರತದಲ್ಲಿ ಬಿಡುಗಡೆ ದಿನಾಂಕ

ಒನ್ಪ್ಲಸ್ 13s ಫೋನ್ ಜೂನ್ 5 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಅಧಿಕೃತವಾಗಿ ದೃಢಪಡಿಸಿದೆ. ಈ ಸ್ಮಾರ್ಟ್ಫೋನ್ನ ಬೆಲೆ ಮತ್ತು ಅಧಿಕೃತ ವಿಶೇಷಣಗಳನ್ನು ಸಹ ಈ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಲಾಗುವುದು.
ಒನ್ಪ್ಲಸ್ 13S ವೈಶಿಷ್ಟ್ಯಗಳು
ಒನ್ಪ್ಲಸ್ 13S ನಲ್ಲಿ 6.32 ಇಂಚಿನ AMOLED ಡಿಸ್ಪ್ಲೇ ಜೊತೆಗೆ 20Hz ರಿಫ್ರೆಶ್ ರೇಟ್ನೊಂದಿಗೆ ಬರುತ್ತದೆ. ಇದು ಉತ್ತಮ ದೃಶ್ಯ ಅನುಭವವನ್ನು ಒದಗಿಸುತ್ತದೆ. ಈ ಒನ್ಪ್ಲಸ್ ನಲ್ಲಿ ಹೊಸ ಎಐ ಪ್ಲಸ್ ಮೈಂಡ್ ಸೌಲಭ್ಯವನ್ನು ಪರಿಚಯಿಸಲಾಗಿದೆ. ಇದರಲ್ಲಿ ಕಂಪನಿಯು ಹೊಸ “ಪ್ಲಸ್ ಕೀ” ಅನ್ನು ಸಹ ನೀಡುತ್ತಿದ್ದು, ಇದು ಬಳಕೆದಾರರಿಗೆ AI ವೈಶಿಷ್ಟ್ಯಗಳು ಮತ್ತು ಕಸ್ಟಮ್ ಶಾರ್ಟ್ಕಟ್ಗಳಿಗೆ ಪ್ರವೇಶವನ್ನು ನೀಡುತ್ತದೆ.
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಎಲೈಟ್ ಚಿಪ್ಸೆಟ್, 12GB ಅಥವಾ 16GB LPDDR5x RAM, ಮತ್ತು 512GB ಸ್ಟೋರೇಜ್ ಆಯ್ಕೆಗಳು ಲಭ್ಯವಿರಬಹುದು. ಇದು ಆಂಡ್ರಾಯ್ಡ್ 15 ಆಧಾರಿತ ColorOS 15 ಅನ್ನು ರನ್ ಮಾಡುತ್ತದೆ.
ಕ್ಯಾಮರಾದ ಬಗ್ಗೆ ಹೇಳುವುದಾದರೆ, ಇದರ ಹಿಂದಿನ ಭಾಗದಲ್ಲಿ 50MP ಪ್ರಾಥಮಿಕ ಸೆನ್ಸಾರ್ ಮತ್ತು ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಒನ್ಪ್ಲಸ್ 13s ಸ್ಮಾರ್ಟ್ಫೋನ್ ದೊಡ್ಡ 6,260mAh ಬ್ಯಾಟರಿ, 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ, ದೀರ್ಘಕಾಲಿಕ ಬಳಕೆಗಾಗಿ ಸಿದ್ಧವಾಗಿದೆ.
ಇತರೆ ವೈಶಿಷ್ಟ್ಯಗಳಲ್ಲಿ 5G, Wi-Fi 7, ಬ್ಲೂಟೂತ್ 5.4, NFC, GPS, USB ಟೈಪ್-ಸಿ, ಸ್ಟೀರಿಯೋ ಸ್ಪೀಕರ್ಗಳು ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಸೇರಿದಂತೆ ವಿವಿಧ ಸಂಪರ್ಕ ಆಯ್ಕೆಗಳು ಲಭ್ಯವಿರಬಹುದು.
ಭಾರತದಲ್ಲಿ ಒನ್ಪ್ಲಸ್ 13s ಬೆಲೆ (ನಿರೀಕ್ಷಿಸಲಾಗಿದೆ)
ವರದಿಗಳ ಪ್ರಕಾರ, ಮುಂಬರುವ ಸ್ಮಾರ್ಟ್ಫೋನ್ ಸುಮಾರು ರೂ. 55,000 ಬೆಲೆಯಲ್ಲಿ ಬರಬಹುದು. ಕಂಪನಿಯು OnePlus 13s ನ ನಿಜವಾದ ಬೆಲೆ ಮತ್ತು ಅದರ ಬಣ್ಣ ಆಯ್ಕೆಗಳ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.