ಇತ್ತೀಚಿನ ದಿನಗಳಲ್ಲಿ, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ “ನಥಿಂಗ್” ಎಂಬ ಬ್ರಾಂಡ್ ತನ್ನ ವಿಶಿಷ್ಟವಾದ ವಿನ್ಯಾಸ ಹಾಗೂ ನವೀನ ತಂತ್ರಜ್ಞಾನದಿಂದ ಗ್ರಾಹಕರ ಮನಸ್ಸು ಗೆದ್ದಿದೆ. ಈಗ, ನಥಿಂಗ್ ತನ್ನ ಮುಂದಿನ ನೂತನ ಉತ್ಪನ್ನ “Nothing Phone 3” ಅನ್ನು ಪರಿಚಯಿಸಲು ಸಜ್ಜಾಗಿದೆ. ಈ ಲೇಖನದಲ್ಲಿ ನಥಿಂಗ್ ಫೋನ್ 3 ಬಗ್ಗೆ ಕೆಲವು ಮಾಹಿತಿಯನ್ನು ತಿಳಿಯೋಣ.
Nothing Phone 3 ಬಿಡುಗಡೆ ದಿನಾಂಕ
ನಥಿಂಗ್ ಕಂಪನಿಯು ಈ ಹೊಸ ಫೋನಿನ ಟೀಸರ್ ಅನ್ನು ಪೋಸ್ಟ್ ಮಾಡಿದೆ. ಟೀಸರ್ ನ ಪ್ರಕಾರ, ನಥಿಂಗ್ ಫೋನ್ (3) ಅನ್ನು 2025ರ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನಥಿಂಗ್ ಫೋನ್ (1) ಮತ್ತು ಫೋನ್ (2) ಅನ್ನು ಕಳೆದ ವರ್ಷಗಳಲ್ಲಿ ಜುಲೈನಲ್ಲಿ ಬಿಡುಗಡೆ ಮಾಡಲಾಗಿತ್ತು.
Nothing Phone (3) – ನಿರೀಕ್ಷಿತ ವೈಶಿಷ್ಟ್ಯಗಳು
ನಥಿಂಗ್ ಫೋನ್ (3) ನಲ್ಲಿ ನವೀನವಾದ ತಂತ್ರಜ್ಞಾನ ಹಾಗೂ ಹಲವಾರು ಉತ್ತಮ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಫೋನ್‌ನಲ್ಲಿ ನಿರೀಕ್ಷಿಸಬಹುದಾದ ಪ್ರಮುಖ ವೈಶಿಷ್ಟ್ಯಗಳು:
ಡಿಸ್ಪ್ಲೇ: 6.7 ಇಂಚಿನ AMOLED ಡಿಸ್ಪ್ಲೇ, ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಹೊಂದಿರಲಿದೆ.
ಪ್ರೊಸೆಸರ್: ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಹೊಂದಿರುವ ಸಾಧ್ಯತೆಗಳಿವೆ.
RAM ಮತ್ತು ಸ್ಟೋರೇಜ್: 12GB RAM ಮತ್ತು 256GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿರಬಹುದು.
ಕ್ಯಾಮೆರಾ ಸೆಟ್‌ಅಪ್: 50MP ಪ್ರಾಥಮಿಕ ಕ್ಯಾಮೆರಾ ಮತ್ತು 32MP ಫ್ರಂಟ್ ಕ್ಯಾಮೆರಾ.
ಬ್ಯಾಟರಿ: 5,000mAh ಬ್ಯಾಟರಿ ಜೊತೆಗೆ 50W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 20W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಪಡೆಯಬಹುದು.
Nothing Phone (3) ಬೆಲೆ ಎಷ್ಟು ಇರುತ್ತೆ?
ಪ್ರಸ್ತುತ ವರದಿಗಳ ಪ್ರಕಾರ, ನಥಿಂಗ್ ಫೋನ್ (3) ಬೆಲೆ 1064 ಯುಎಸ್ ಡಾಲರ್ (ಸರಿಸುಮಾರು 90,510 ರೂ.) ಆಗಿರುತ್ತದೆ. ಇದನ್ನು ಭಾರತದಲ್ಲಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಬಹುದು.