Honor Pad 10: ಹಾನರ್ ಪ್ಯಾಡ್ 10 ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ಯಾಬ್ ಉನ್ನತ ಕಾರ್ಯಕ್ಷಮತೆಯನ್ನು ಹೊಂದಿದ್ದು, ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಆಕರ್ಷಕ ಪಿಚರ್ಸ್ ಗಳನ್ನು ಮತ್ತು ಇತ್ತೀಚಿನ ಟ್ಯಾಬ್ ಗಳನ್ನು ಖರೀದಿಸಲು ಬಯಸಿದರೆ, ಈ ಹಾನರ್ ಪ್ಯಾಡ್ 10 ಒಂದು ಉತ್ತಮವಾದ ಆಯ್ಕೆಯಾಗಿ ಪರಿಗಣಿಸಬಹುದು. ಹಾಗಿದ್ದರೆ ಈ ಟ್ಯಾಬ್ ನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
Honor Pad 10 ಬೆಲೆ ಮತ್ತು ಲಭ್ಯತೆ
ಹಾನರ್ ಪ್ಯಾಡ್ 10 ಬೆಲೆ ಬಗ್ಗೆ ಹೇಳುವುದಾದರೆ, ಮಲೇಷ್ಯಾ ದೇಶದಲ್ಲಿ MYR 1,499 (ಸುಮಾರು ರೂ. 30,200) ಆಗಿರುತ್ತದೆ. ಫ್ರಾನ್ಸ್ ದೇಶದಲ್ಲಿ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ EUR 399.90 (ಸುಮಾರು ರೂ. 38,800) ಬೆಲೆಯಲ್ಲಿ ಲಭ್ಯವಿದೆ.
Honor Pad 10 ವಿಶೇಷತೆಗಳು
ಹಾನರ್ ಪ್ಯಾಡ್ 12.1 ಇಂಚಿನ IPS LCD ಪರದೆಯನ್ನು ಹೊಂದಿದ್ದು, ಈ ಟ್ಯಾಬ್ಲೆಟ್ 2560×1600 ಪಿಕ್ಸೆಲ್‌ಗಳ ರೆಸಲ್ಯೂಷನ್ ಅನ್ನು ಪಡೆದಿದೆ. ಹಾಗೆ ಇದು 120Hz ರಿಫ್ರೆಶ್ ದರವನ್ನು ಮತ್ತು 249PPI ಸಾಂದ್ರತೆಯನ್ನು ಹೊಂದಿದೆ. ವಿಶೇಷವಾಗಿ ಇದು TÜV ರೈನ್‌ಲ್ಯಾಂಡ್ ಕಡಿಮೆ ನೀಲಿ ಬೆಳಕು ಮತ್ತು ಕಣ್ಣಿನ ರಕ್ಷಣೆಗಾಗಿ ಫ್ಲಿಕರ್-ಮುಕ್ತ ಪ್ರಮಾಣೀಕರಣಗಳೊಂದಿಗೆ ಬರುತ್ತದೆ.
ಕಾರ್ಯಕ್ಷಮತೆ ಮತ್ತು ಸಾಫ್ಟ್‌ವೇರ್
ಹಾನರ್ ಪ್ಯಾಡ್ 10 ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಫೆಸರ್ ಇಂದ ಚಾಲಿತವಾಗಿದೆ. 8GB RAM ಮತ್ತು 256GB ಸಂಗ್ರಹಣೆಯನ್ನು ಹೊಂದಿದೆ. ಈ ಸಾಧನದಲ್ಲಿ ಬಹುಕಾರ್ಯಕ ಅಪ್ಲಿಕೇಶನ್‌ಗಳನ್ನು ಸರಾಗವಾಗಿ ನಿರ್ವಹಿಸಬಹುದು. ಈ ಪ್ಯಾಡ್ ನಲ್ಲಿ ಮ್ಯಾಜಿಕ್‌ಓಎಸ್ 9.0 ಜೊತೆಗೆ ಆಂಡ್ರಾಯ್ಡ್ 15 ಅಡಿಯಲ್ಲಿ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸಾಮರ್ಥ್ಯಗಳು
ಹಾನರ್ ಪ್ಯಾಡ್ನ ಕ್ಯಾಮೆರಾದ ಬಗ್ಗೆ ಹೇಳುವುದಾದರೆ, 8-ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾಗಳನ್ನು ಹೊಂದಿರುತ್ತದೆ. ಈ ಕ್ಯಾಮೆರಾಗಳು ಸ್ನ್ಯಾಪ್‌ಶಾಟ್‌ಗಳು ಮತ್ತು ಸ್ಪಷ್ಟ ಕರೆ ಗುಣಮಟ್ಟದೊಂದಿಗೆ ಸಾಕಷ್ಟು ಉತ್ತಮವಾಗಿ ನಿರ್ವಹಿಸುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಹಾನರ್ ಪ್ಯಾಡ್ 10 ನ ಅತ್ಯುತ್ತಮ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿ. ಇದು 10,100mAh ನ ದೊಡ್ಡ ಬ್ಯಾಟರಿಯನ್ನು ಹೊಂದಿದೆ, ಇದು ಬಳಕೆದಾರರು ಆಟಗಳನ್ನು ಆಡುತ್ತಿರಲಿ, ಕೆಲಸ ಮಾಡುತ್ತಿರಲಿ ಅಥವಾ ಅಧ್ಯಯನ ಮಾಡುತ್ತಿರಲಿ ದೀರ್ಘಕಾಲ ಉಳಿಯುತ್ತದೆ.
ಇತರೆ ವೈಶಿಷ್ಟ್ಯಗಳು
ಈ ಟ್ಯಾಬ್ಲೆಟ್ ನಲ್ಲಿ ಪ್ರಭಾವಶಾಲಿ ಆರು-ಸ್ಪೀಕರ್ ಸೆಟ್ ಗಳನ್ನು ಜೋಡಿಸಲಾಗಿದೆ. ವೀಡಿಯೊಗಳನ್ನು ನೋಡಲು ಅಥವಾ ಫೋನ್ ಕರೆಗಳನ್ನು ಮಾಡುವಾಗ ಈ ಟ್ಯಾಬ್ಲೆಟ್ ಅತ್ಯುತ್ತಮವಾಗಿದೆ. USB ಟೈಪ್-ಸಿ ಮತ್ತು ವೈ-ಫೈ ಸಂಪರ್ಕವು ಹಲವು ವೈಶಿಷ್ಟಗಳನ್ನು ನಾವು ಈ ಪ್ಯಾಡ್ ನಲ್ಲಿ ನೋಡಬಹುದು.
ಇದು ಉತ್ತಮ ಗುಣಮಟ್ಟದ ವಿನ್ಯಾಸದ ಟ್ಯಾಬ್ಲೆಟ್ ಆಗಿದೆ. ದೊಡ್ಡ ಪ್ರದರ್ಶನ, ಶಕ್ತಿಯುತ ಕಾರ್ಯಕ್ಷಮತೆ ಮತ್ತು ದೀರ್ಘ ಬ್ಯಾಟರಿ ಅವಧಿಯೊಂದಿಗೆ, ಈ ಹಾನರ್ ಟ್ಯಾಬ್ಲೆಟ್ ಕೆಲಸ ಮಾಡಲು, ಅಧ್ಯಯನ ಮಾಡಲು ಅಥವಾ ಚಲನಚಿತ್ರಗಳನ್ನು ವೀಕ್ಷಿಸಲು ಉತ್ತಮ ಆಯ್ಕೆಯಾಗಿದೆ.