Google Pixel 10 Pro XL: ಗೂಗಲ್ ಕಂಪನಿಯು ಹೊಸ ಪ್ರೀಮಿಯಂ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಗೂಗಲ್ ಪಿಕ್ಸೆಲ್ 10 ಸರಣಿಯಲ್ಲಿ ಬಿಡುಗಡೆ ಮಾಡಲಿದೆ. ಈ ಪಿಕ್ಸೆಲ್ ಸರಣಿಯು ಪಿಕ್ಸೆಲ್ 10, ಪಿಕ್ಸೆಲ್ 10 ಪ್ರೊ, ಪಿಕ್ಸೆಲ್ 10 ಪ್ರೊ ಎಕ್ಸ್ಎಲ್ ಮತ್ತು ಪಿಕ್ಸೆಲ್ 10 ಪ್ರೊಫೈಲ್ ನೊಂದಿಗೆ ಬರಲಿದೆ. ಈ ಫೋನ್ ಗಳು ಪ್ರಬಲವಾದ ಪ್ರಮುಖ ವೈಶಿಷ್ಟ್ಯಗಳೊಂದಿಗೆ ಮತ್ತು ಸ್ಲಿಮ್ ವಿನ್ಯಾಸದೊಂದಿಗೆ ಬರಲಿದೆ. ಇದು ಕಾರ್ಯಕ್ಷಮತೆ, ಪ್ರದರ್ಶನ ಮತ್ತು ಕ್ಯಾಮೆರಾಗಳಲ್ಲಿ ಉತ್ತಮವಾದ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಹಾಗಿದ್ದರೆ ಈ ಹೊಸ ಗೂಗಲ್ ಪಿಕ್ಸೆಲ್ 10 ಪ್ರೊ ಎಕ್ಸ್ಎಲ್ ಫೋನಿನ ವೈಶಿಷ್ಟ್ಯತೆಗಳ ಬಗ್ಗೆ ತಿಳಿಯೋಣ.
Google Pixel 10 Pro XL ಡಿಸ್ಪ್ಲೇ ಮತ್ತು ವಿನ್ಯಾಸ
ಗೂಗಲ್ ಪಿಕ್ಸೆಲ್ 10 ಪ್ರೊ ಎಕ್ಸ್ಎಲ್ ಸ್ಮಾರ್ಟ್ ಫೋನ್ 6.82 ಇಂಚಿನ 1344 x 2992 ಪಿಕ್ಸಲ್ ರೆಸಲ್ಯೂಷನ್ ಹೊಂದಿದ್ದು, 120Hz ರಿಪ್ರೆಶ್ ದರದೊಂದಿಗೆ ಬರುತ್ತದೆ. ಇದು ಉತ್ತಮವಾದ ಪ್ರದರ್ಶನವನ್ನು ನೀಡುತ್ತದೆ. ಹಾಗೆ ಹಾಗೆ ಈ ಫೋನ್ ಪಂಚ್ ಹೋಲ್ ಪ್ರೇಮ್ ವಿನ್ಯಾಸವನ್ನು ಹೊಂದಿದೆ. ಇದು ಗುಣಮಟ್ಟದ ಹಾಗೂ ಪ್ರೀಮಿಯಂ ವಿನ್ಯಾಸವನ್ನು ಒದಗಿಸುತ್ತದೆ.
ಪ್ರೊಸೆಸರ್ ಮತ್ತು ಸಾಫ್ಟ್ವೇರ್
ಪಿಕ್ಸೆಲ್ 10 ಪ್ರೊ ಎಕ್ಸೆಲ್ ಗೂಗಲ್ ನ ಹೊಸ ಟೆನ್ಸರ್ G5 ಚಿಪ್ ಸೆಟ್ ಅನ್ನು ಹೊಂದಿದ್ದು, ಇದು 16 GB RAM ಮತ್ತು 256 GB ಸ್ಟೋರೇಜ್ ಅನ್ನು ಹೊಂದಿರುತ್ತದೆ. ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನು ನೀಡಿದ್ದು, ಸುಗಮವಾಗಿ ಕಾರ್ಯವನ್ನು ನಿರ್ವಹಿಸಲು ಅನುಕೂಲಕರವಾಗಿದೆ. ಜೊತೆಗೆ ಈ ಫೋನಿನಲ್ಲಿ ಆಂಡ್ರಾಯ್ಡ್ 15 ಅಡಿಯಲ್ಲಿ ಕೆಲಸವನ್ನು ಮಾಡುತ್ತದೆ.
ಕ್ಯಾಮೆರಾದ ಸಾಮರ್ಥ್ಯ
ಈ ಗೂಗಲ್ ಪಿಕ್ಸೆಲ್ ಫೋನಿನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಅನ್ನು ಹೊಂದಿದ್ದು, 50 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ, 50 ಮೆಗಾ ಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 50 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರವನ್ನು ನೀಡಲಾಗಿದೆ. ಈ ಎಲ್ಲಾ ಕ್ಯಾಮೆರಾಗಳು ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆ ಹಿಡಿಯಬಹುದು.
ಬ್ಯಾಟರಿ ಮತ್ತು ಚಾರ್ಜಿಂಗ್
ಈ ಮೊಬೈಲ್ಗೆ 5000mAh ಬ್ಯಾಟರಿ ಅನ್ನು ನೀಡಲಾಗಿದ್ದು, ಬಳಕೆದಾರರು ಇಡೀ ದಿನ ಸುಲಭವಾಗಿ ಬಳಸಲು ಸಹಾಯಕವಾಗಿದೆ. ಹಾಗೆ ಇದನ್ನು ಚಾರ್ಜ್ ಮಾಡಲು 45W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ.
ಇತರೆ ವೈಶಿಷ್ಟ್ಯಗಳು
ಗೂಗಲ್ ಪಿಕ್ಸಲ್ 10 ಪ್ರೊ ಎಕ್ಸೆಲ್ ನಲ್ಲಿ ಡ್ಯುಯಲ್ ಸಿಮ್, 4G, 5G, ವೈಫೈ ಮತ್ತು ಎನ್ಎಫ್ಸಿ ನಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.
ಬಣ್ಣಗಳ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಪಿಕ್ಸೆಲ್ 10 ನೀಲಿ, ಹಳದಿ, ನೇರಳೆ, ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರಲಿದೆ. Pixel 10 Pro ಮತ್ತು Pixel 10 Pro XL ಹಸಿರು, ಬೂದು, ಪಿಂಗಾಣಿ, ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರಲಿದೆ ಎಂದು ಹೇಳಲಾಗುತ್ತದೆ.
ಗೂಗಲ್ ಪಿಕ್ಸಲ್ 10 ಎಕ್ಸ್‌ಎಲ್ ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ
ಗೂಗಲ್ ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್ (Google Pixel 10 Pro XL) ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಸ್ಮಾರ್ಟ್‌ಫೋನ್‌ನ ಬೆಲೆ ಅಂದಾಜು ರೂ.1,39,990 ಆಗಿರಬಹುದು. ಇನ್ನೂ ಯಾವುದೇ ಖಚಿತವಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಲ್ಲ.