Mobiles Gadgets Tablets Laptops TV Movies Automobile General

Acer Super ZX 5G ವೈಶಿಷ್ಟ್ಯಗಳು –  2025ರ Top Budget 5G ಫೋನ್  ₹10,000 

Published On: May 29, 2025 9:03 pm
Acer Super ZX 5G
Google News
Follow Us

Acer ಕಂಪನಿಯು 2025ರ ಏಪ್ರಿಲ್‌ನಲ್ಲಿ ಭಾರತದಲ್ಲಿ ತನ್ನ ಹೊಸ 5G ಸ್ಮಾರ್ಟ್‌ಫೋನ್‌ಗಳಾದ Acer Super ZX ಮತ್ತು Super ZX Pro ಅನ್ನು ಬಿಡುಗಡೆ ಮಾಡಿದೆ.  ಈ ಫೋನ್‌ಗಳು ಬಜೆಟ್ ಬೆಲೆಯಲ್ಲಿಯೇ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುತ್ತವೆ. ಈ ಲೇಖನದಲ್ಲಿ, ಏಸರ್ ಸೂಪರ್ ZX 5G ಫೋನ್‌ನ ವೈಶಿಷ್ಟ್ಯಗಳು ಮತ್ತು ಬೆಲೆಯ ಕುರಿತು ವಿವರವಾಗಿ ತಿಳಿಸೋಣ. 

Acer Super ZX 5G ಬೆಲೆ ಮತ್ತು ಲಭ್ಯತೆ

ಏಸರ್ ಸೂಪರ್ ZX 5G ಫೋನ್‌ವು ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. 

  • 4GB RAM + 64GB ಸ್ಟೋರೇಜ್ ನ ಬೆಲೆ ₹9,999 
  • 6GB RAM + 128GB ಸ್ಟೋರೇಜ್ ನ ಬೆಲೆ ₹10,999
  • 8GB RAM + 256GB ಸ್ಟೋರೇಜ್ ನ ಬೆಲೆ ₹11,999

ಈ ಫೋನ್ ಕಪ್ಪು, ನೀಲಿ ಮತ್ತು ಗ್ರೀನ್  ಬಣ್ಣಗಳಲ್ಲಿ Amazon ಮೂಲಕ ಭಾರತದಲ್ಲಿ ಲಭ್ಯವಿವೆ. 

38

ಡಿಸ್ಪ್ಲೇ ಮತ್ತು ವಿನ್ಯಾಸ

ಏಸರ್ ಸೂಪರ್ ZX 5G (Acer Super ZX 5G) ಫೋನ್‌ನಲ್ಲಿ 6.78 ಇಂಚಿನ FHD+ LCD ಡಿಸ್ಪ್ಲೇ ಇದೆ, ಇದು 120Hz ರಿಫ್ರೆಶ್ ದರವನ್ನು ಹೊಂದಿದ್ದು, 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಬರುತ್ತದೆ. ಇದು ಪಂಚ್-ಹೋಲ್ ವಿನ್ಯಾಸದಲ್ಲಿ ಬಂದಿದೆ. 

ಕಾರ್ಯಕ್ಷಮತೆ ಮತ್ತು ಸಾಫ್ಟ್‌ವೇರ್

ಈ ಫೋನ್‌ನ್ನು ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಚಾಲಿತಗೊಳಿಸುತ್ತಿದ್ದು, 6nm ಆಕ್ಟಾ ಕೋರ್ ತಂತ್ರಜ್ಞಾನದಲ್ಲಿ ನಿರ್ಮಿತವಾಗಿದೆ. ಇದು 2.4GHz ವೇಗದ ಆಕ್ಟಾ-ಕೋರ್ ಪ್ರೊಸೆಸರ್‌ನ್ನು ಹೊಂದಿದೆ. ಈ ಫೋನ್‌ವು ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. 

ಕ್ಯಾಮೆರಾ ವೈಶಿಷ್ಟ್ಯಗಳು

Acer Super ZX 5G ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. 64MP ಪ್ರಾಥಮಿಕ ಸೆನ್ಸಾರ್ ಸೋನಿ IMX682 ಕ್ಯಾಮೆರಾ, 2MP ಡೆಪ್ತ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಶೂಟರ್ ಗಳನ್ನು ಹೊಂದಿದೆ. ಫ್ರಂಟ್ ಕ್ಯಾಮೆರಾ 13MP ಸೆನ್ಸಾರ್‌ನೊಂದಿಗೆ ಬಂದಿದೆ.  

ಬ್ಯಾಟರಿ ಮತ್ತು ಚಾರ್ಜಿಂಗ್

ಈ ಫೋನ್‌ನಲ್ಲಿ 5000 mAh ಸಾಮರ್ಥ್ಯದ ಸಿಲಿಕಾನ್ ಕಾರ್ಬನ್ ಬ್ಯಾಟರಿ ಇದೆ, ಇದು 33W  ವೇಗದ ಚಾರ್ಜಿಂಗ್‌ನ್ನು ಬೆಂಬಲಿಸುತ್ತದೆ. 

ಸಂಪರ್ಕ ಮತ್ತು ಇತರ ವೈಶಿಷ್ಟ್ಯಗಳು

ಈ 5G ಪೋನಿನಲ್ಲಿ 5G ನೆಟ್‌ವರ್ಕ್, ಡ್ಯುಯಲ್ ಸಿಮ್, Wi-Fi ಬ್ಲೂಟೂತ್, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ನೀರು ಮತ್ತು ಧೂಳಿನ ವಿರುದ್ಧ IP55 ರೇಟಿಂಗ್ ಅನ್ನು ಹೊಂದಿರುತ್ತದೆ. 

Pallavi N

My name is Pallavi N. I am an experienced content writer. Currently I am writing high quality and seo friendly content about various mobiles and gadgets on Qntechhub.

WhatsApp Channel

Join Now

Telegram Channel

Join Now