Mobiles Gadgets Tablets Laptops TV Movies Automobile General

₹20,000 ಒಳಗಿನ ಅತ್ಯುತ್ತಮ Mobiles (2025) | ಪ್ರೀಮಿಯಂ ಫೀಚರ್‌ಗಳೊಂದಿಗೆ ಬಜೆಟ್ ಫೋನ್‌ಗಳು 

Published On: May 30, 2025 5:05 pm
Mobiles
Google News
Follow Us

2025ರಲ್ಲಿ ₹20,000 ಒಳಗಿನ ಮೊಬೈಲ್‌ ಫೋನ್‌ಗಳನ್ನು ಹುಡುಕುತ್ತಿರುವವರು ಸುಲಭವಾಗಿ ಪ್ರೀಮಿಯಂ ಫೀಚರ್‌ಗಳೊಂದಿಗೆ ಉತ್ತಮ ಆಯ್ಕೆಯನ್ನು ಪಡೆಯಬಹುದು. 5G ಬೆಂಬಲ, AMOLED ಡಿಸ್ಪ್ಲೇ, ಮಲ್ಟಿ-ಕ್ಯಾಮೆರಾ ಸೆಟಪ್, ದೊಡ್ಡ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌ ಮೊದಲಾದವು ಈಗ ಎಲ್ಲಾ ಬಜೆಟ್‌ ಫೋನ್‌ಗಳಲ್ಲಿಯೂ ಸಾಮಾನ್ಯವಾಗಿವೆ. ನಾವು ಈಗ 2025ರಲ್ಲಿ ಖರೀದಿಸಬಹುದಾದ ₹20,000 ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಮಾಡಲಾಗಿದೆ.

₹20,000 ಒಳಗಿನ ಅತ್ಯುತ್ತಮ Mobiles (2025)

ನಾವು 2025ರಲ್ಲಿ ಲಭ್ಯವಿರುವ ಅತ್ಯುತ್ತಮ 5 ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿದುಕೊಳೋಣ. 

Realme P3 Pro 

53

ರಿಯಲ್‌ಮಿ P3 Pro ತನ್ನ ಉತ್ತಮ ಡಿಸೈನಿಂಗ್‌ ಹಾಗೂ ವೇಗದ ಕಾರ್ಯಕ್ಷಮತೆಯ ಮೂಲಕ ₹20,000 ಶ್ರೇಣಿಯಲ್ಲಿ ಶ್ರೇಷ್ಠವಾಗಿದೆ. AMOLED ಡಿಸ್ಪ್ಲೇ ನೋಡಲು ತೀಕ್ಷ್ಣವಾಗಿದೆ ಮತ್ತು 120Hz ರಿಪ್ರೇಶ್ ದರ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ಇದರ 80W ಚಾರ್ಜಿಂಗ್‌ ವೇಗದಲ್ಲಿ ಫೋನ್‌ ಚಾರ್ಜ್ ಆಗುತ್ತದೆ.

ಡಿಸ್ಪ್ಲೇ: 6.83 ಇಂಚಿನ AMOLED, 120Hz ರಿಫ್ರೆಶ್‌ರೇಟ್‌

ಪ್ರೊಸೆಸರ್: ಸ್ನಾಪ್‌ಡ್ರಾಗನ್ 7s Gen 3 

ಕ್ಯಾಮೆರಾ: 50MP + 2MP ಡ್ಯುಯಲ್‌ ರಿಯರ್‌ ಕ್ಯಾಮರಾ, 16MP ಫ್ರಂಟ್ ಕ್ಯಾಮೆರಾ

ಬ್ಯಾಟರಿ: 6000mAh, 80W ಚಾರ್ಜಿಂಗ್

ಬೆಲೆ: ₹20,999

POCO X7 5G

54

ಪೋಕೋ X7 ಗೇಮಿಂಗ್‌ ಮತ್ತು ಮಾದರಿಯಾಗಿ ಬಳಕೆ ಮಾಡಲು ಅತ್ಯುತ್ತಮವಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಚಿಪ್‌ ಸೆಟ್‌ ಮತ್ತು HDR10+ AMOLED ಡಿಸ್ಪ್ಲೇ ವಿಡಿಯೋ ಮತ್ತು ಗೇಮಿಂಗ್‌ ಅನುಭವವನ್ನು ಮತ್ತಷ್ಟು ಸುಂದರಗೊಳಿಸುತ್ತದೆ.

ಡಿಸ್ಪ್ಲೇ: 6.67 ಇಂಚಿನ AMOLED ಡಿಸ್ಪ್ಲೇ 

ಪ್ರೊಸೆಸರ್: ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ 

ಕ್ಯಾಮೆರಾ: 50MP + 8MP Ultra-wide + 2MP ರಿಯರ್ ಕ್ಯಾಮರಾ, 16MP ಫ್ರಂಟ್ ಕ್ಯಾಮೆರಾ 

ಬ್ಯಾಟರಿ: 5500mAh, 45W ಚಾರ್ಜಿಂಗ್

ಬೆಲೆ: ₹18,999

Infinix Note 50s 5G

55

ಇನ್ಫಿನಿಕ್ಸ್ ನೋಟ್ 50s 5G ಕಡಿಮೆ ಬೆಲೆಗೆ ಅತ್ಯುತ್ತಮ 5G ಸ್ಪೀಡ್‌ ಒದಗಿಸುತ್ತದೆ. 64MP ಕ್ಯಾಮೆರಾ ಈ ಶ್ರೇಣಿಯಲ್ಲಿ ಅಪರೂಪ ಮತ್ತು ಫೋಟೋ ಕ್ವಾಲಿಟಿ ಕೂಡ ಚೆನ್ನಾಗಿದೆ. 

ಡಿಸ್ಪ್ಲೇ: 6.78 ಇಂಚಿನ FHD+ AMOLED, 144Hz ರಿಫ್ರೆಶ್ ದರ 

ಪ್ರೊಸೆಸರ್: ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಪ್ರೊಸೆಸರ್ 

ಕ್ಯಾಮೆರಾ: 64MP + 2MP ಕ್ಯಾಮೆರಾ, 16MP ಫ್ರಂಟ್ ಕ್ಯಾಮೆರಾ 

ಬ್ಯಾಟರಿ: 5500mAh, 45W ಫಾಸ್ಟ್‌ ಚಾರ್ಜಿಂಗ್

ಬೆಲೆ: ₹17,999

CMF Phone 2 Pro 

56

CMF Phone 2 Pro ನೊಥಿಂಗ್‌ ಕಂಪನಿಯಿಂದ ಲಾಂಚ್‌ ಆಗಿರುವ ಬಜೆಟ್‌ ಫೋನ್‌ ಆಗಿದ್ದು, ಅಂದಹಾಗೆ ಡಿಸೈನಿಂಗ್‌ ಮತ್ತು ಯುಐ ಎಕ್ಸ್‌ಪಿರಿಯನ್ಸ್‌ ಎಕ್ಸ್ಲೂಸಿವ್ ಆಗಿದೆ. ಕಸ್ಟಮ್‌ UI, ಕ್ಲೀನ್‌ ಆಂಡ್ರಾಯ್ಡ್‌, ಮತ್ತು ಉತ್ತಮ ಪರ್ಫಾರ್ಮೆನ್ಸ್‌ ಇದನ್ನು ವಿಶಿಷ್ಟವಾಗಿಸುತ್ತದೆ.

ಡಿಸ್ಪ್ಲೇ: 6.77 ಇಂಚಿನ AMOLED, 120Hz

ಪ್ರೊಸೆಸರ್: ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊ 5G ಪ್ರೊಸೆಸರ್ 

ಕ್ಯಾಮೆರಾ: 50MP + 50MP + 8MP ರೀಯರ್ ಕ್ಯಾಮೆರಾ, 16MP ಫ್ರಂಟ್ ಕ್ಯಾಮೆರಾ

ಬ್ಯಾಟರಿ: 5000mAh, 33W ಚಾರ್ಜಿಂಗ್

ಬೆಲೆ: ₹18,999

OPPO K13 5G

57

OPPO K13 ಫೋನ್‌ ಅನ್ನು ಪ್ರೀಮಿಯಂ ಲುಕ್‌ ಮತ್ತು ಸ್ಟೇಬಲ್‌ ಪರ್ಫಾರ್ಮೆನ್ಸ್‌ಗಾಗಿ ಆರಿಸಬಹುದು. ಸ್ನಾಪ್‌ಡ್ರಾಗನ್ 6 Gen 4 ಪ್ರೊಸೆಸರ್‌ ಮಧ್ಯಮ ಗೇಮಿಂಗ್‌ ಹಾಗೂ ಡೇಲಿ ಬಳಕೆಗೆ ಸೂಕ್ತವಾಗಿದೆ. ಕ್ಯಾಮೆರಾ ಕ್ವಾಲಿಟಿಯು ಉತ್ತಮವಾಗಿದೆ, ವಿಶೇಷವಾಗಿ ಸೆಲ್ಫಿಗಳಿಗಾಗಿ.

ಡಿಸ್ಪ್ಲೇ: 6.67″ AMOLED, 120Hz

ಪ್ರೊಸೆಸರ್: ಸ್ನಾಪ್‌ಡ್ರಾಗನ್ 6 Gen 4 5G ಪ್ರೊಸೆಸರ್ 

ಕ್ಯಾಮೆರಾ: 50MP + 2MP ರಿಯರ್‌ ಕ್ಯಾಮೆರಾ 16MP ಫ್ರಂಟ್ ಕ್ಯಾಮೆರಾ 

ಬ್ಯಾಟರಿ: 7000mAh, 80W SUPERVOOC ಫಾಸ್ಟ್ ಚಾರ್ಜಿಂಗ್ 

ಬೆಲೆ: ₹17,999

2025ರಲ್ಲಿ ₹20,000 ಒಳಗಿನ ಸ್ಮಾರ್ಟ್‌ಫೋನ್‌ಗಳು ಬಹಳ ಉತ್ತಮ ಆಯ್ಕೆಗಳನ್ನು ನೀಡುತ್ತಿವೆ. ಪೋಕೋ X7 ಗೇಮಿಂಗ್‌ ಪ್ರಿಯರಿಗೆ, ಮತ್ತು CMF ಫೋನ್ 2 Pro ಡಿಸೈನ್‌ ಪ್ರಿಯರಿಗೆ ಸೂಕ್ತ. ನಿಮ್ಮ ಬಳಕೆ ದೃಷ್ಟಿಯಿಂದ ನೀವು ಉತ್ತಮವಾದ ಆಯ್ಕೆಯನ್ನು ಮಾಡಬಹುದು.

Pallavi N

My name is Pallavi N. I am an experienced content writer. Currently I am writing high quality and seo friendly content about various mobiles and gadgets on Qntechhub.

WhatsApp Channel

Join Now

Telegram Channel

Join Now