Mobiles Gadgets Tablets Laptops TV Movies Automobile General

iPhone 17 Pro Max ಭಾರತದಲ್ಲಿ ಬಿಡುಗಡೆಯ ದಿನಾಂಕ ಮತ್ತು ಬೆಲೆ

Published On: May 30, 2025 4:24 pm
iPhone 17 Pro Max
Google News
Follow Us

ಐಫೋನ್ 17 ಪ್ರೋ ಮ್ಯಾಕ್ಸ್ (iPhone 17 Pro Max) ಎಂಬುದು ಆಪಲ್ ಕಂಪನಿಯ 2025ರ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿದ್ದು, ಹೊಸ A19 ಪ್ರೋ ಪ್ರೊಸೆಸರ್, 6.9 ಇಂಚಿನ OLED ಸ್ಕ್ರೀನ್ ಮತ್ತು 48MP ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿದೆ 4700mAh ಬ್ಯಾಟರಿ, 50W ವೇಗದ ಚಾರ್ಜಿಂಗ್ ಹಲವು ಹೊಸ ವೈಶಿಷ್ಟ್ಯಗಳು, ಡಿಸೈನ್ ಬದಲಾವಣೆಗಳು ಮತ್ತು ಎಐ ಸಾಮರ್ಥ್ಯಗಳೊಂದಿಗೆ ಬರಲಿದೆ. ಇದು ಗೇಮಿಂಗ್, ಫೋಟೋ, ಹಾಗೂ ಪ್ರೊಫೆಷನಲ್ ಬಳಕೆದಾರರಿಗೆ ಸೂಕ್ತವಾದ ಆಯ್ಕೆಯಾಗಿದೆ.

ಈ ಲೇಖನದಲ್ಲಿ ನಾವು iPhone 17 Pro Max ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ: ಅದರ ನಿರೀಕ್ಷಿತ ವೈಶಿಷ್ಟ್ಯಗಳು, ಡಿಸೈನ್, ಕ್ಯಾಮೆರಾ, ಪ್ರದರ್ಶನ, ಬ್ಯಾಟರಿ, ಪ್ರೋಸೆಸರ್, ಬೆಲೆ ಮತ್ತು ಬಿಡುಗಡೆಯ ದಿನಾಂಕದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

iPhone 17 Pro Max ಬಿಡುಗಡೆ ದಿನಾಂಕ ಮತ್ತು ನಿರೀಕ್ಷಿತ ಬೆಲೆ

ಆಪಲ್ ಐಫೋನ್ 17 ಪ್ರೊ ಮ್ಯಾಕ್ಸ್ ಸೆಪ್ಟೆಂಬರ್ ಎರಡನೇ ವಾರದಲ್ಲಿ ಬಿಡುಗಡೆ ಮಾಡಬಹುದು. ಭಾರತದಲ್ಲಿ, iPhone 17 Pro Max ಬೆಲೆ ಸುಮಾರು 1,64,900 ರೂ. ಆಗಿರಬಹುದು.

ಡಿಸೈನ್ ಮತ್ತು ಡಿಸ್‌ಪ್ಲೇ

43

ಐಫೋನ್ 17 ಪ್ರೊ ಮ್ಯಾಕ್ಸ್ ಈ ಸಮಯದಲ್ಲಿ ಇನ್ನೂ ತೆಳ್ಳಗಿನ ಟೈಟಾನಿಯಂ ದೇಹವನ್ನು ಬಳಸುತ್ತದೆ, ಇದು ಹಗುರವಾಗಿರುವುದಿಲ್ಲ ಆದರೆ ಬಲವಾಗಿರುತ್ತದೆ. ಹಳೆಯ ಐಫೋನ್ ಮಾದರಿಗಳಿಗಿಂತ ಹಿಡಿದಿಡಲು ಇದು ಹೆಚ್ಚು ಆರಾಮದಾಯಕವಾಗಿರುತ್ತದೆ.

6.9 ಇಂಚಿನ Super Retina XDR ಡಿಸ್‌ಪ್ಲೇವು 120Hz ರಿಫ್ರೆಶ್ ರೇಟ್ ಬೆಂಬಲಿಸಿ, ತೀಕ್ಷ್ಣ ಚಿತ್ರಗಳು, ಮತ್ತು ಬಹು ಉತ್ತಮ ವೈಬ್ರೆಂಟ್ ಕಲರ್‌ಗಳನ್ನು ಒದಗಿಸುತ್ತದೆ. ಆಟಗಳು, ವಿಡಿಯೋಗಳು ಅಥವಾ ಜನಪ್ರಿಯ ಆಪ್‌ಗಳನ್ನು ಬಳಸುವಾಗ ಶ್ರೇಷ್ಠ ಅನುಭವ ನೀಡುತ್ತದೆ. 

ಪ್ರೋಸೆಸರ್ ಮತ್ತು ಸಾಫ್ಟ್ವೇರ್ 

ಈ ಐಫೋನ್ 17 ಪ್ರೊ Max ಪೋನಿನಲ್ಲಿ A19 Pro ಚಿಪ್‌ಸೆಟ್ ಆಗಿದ್ದು, ಹೆಚ್ಚು ವೇಗದ ಪ್ರೊಸೆಸಿಂಗ್, AI ಟಾಸ್ಕ್‌ಗಳ ನಿಖರ ನಿರ್ವಹಣೆ ಮತ್ತು ಬ್ಯಾಟರಿ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ಇದು 3nm ತಂತ್ರಜ್ಞಾನದಲ್ಲಿ ತಯಾರಿಸಲಾಗುತ್ತದೆ.

ಜೊತೆಗೆ 12GB RAM ಅನ್ನು ಹೊಂದಿರುತ್ತದೆ. ಬೇರೆ ಯಾವುದೇ ಐಫೋನ್‌ಗಿಂತ ವೇಗವಾಗಿ ಮಲ್ಟಿ ಟಾಸ್ಕಿಂಗ್ ಮತ್ತು ಗೇಮಿಂಗ್ ನಿರ್ವಹಿಸಬಲ್ಲದು.

ಕ್ಯಾಮೆರಾ ವೈಶಿಷ್ಟ್ಯಗಳು

iPhone 17 Pro Max ನಲ್ಲಿ 48MP ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಅನ್ನು ಹೊಂದಿದ್ದು, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 24MP ಫ್ರೆಂಡ್ ಕ್ಯಾಮೆರಾ ವನ್ನು ಹೊಂದಿರುತ್ತದೆ. 

ಬ್ಯಾಟರಿ ಮತ್ತು ಚಾರ್ಜಿಂಗ್

ಐಫೋನ್ 17 ಪ್ರೊ ಮ್ಯಾಕ್ಸ್ ನಲ್ಲಿ 4685mAh ಬ್ಯಾಟರಿಯನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 1.5 ದಿನಗಳವರೆಗೆ ಬ್ಯಾಟರಿ ನಿಲ್ಲಬಹುದು. 35W USB-C ವೇಗದ ಚಾರ್ಜಿಂಗ್ ಬೆಂಬಲವೂ ಇದರಲ್ಲಿ ನೀಡಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ಐಫೋನ್ 17 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ iOS 19 ಬಳಕೆ ಮಾಡುತ್ತಿದ್ದು, ಹೊಸ ಇಂಟುಟಿವ್ ಇಂಟರ್ಫೇಸ್, AI ಶಕ್ತಿತನದ Siri, ಹೊಸ widgets ಹಾಗೂ ಹಲವು  ವೈಶಿಷ್ಟ್ಯಗಳೊಂದಿಗೆ ಬರಲಿದೆ.

Pallavi N

My name is Pallavi N. I am an experienced content writer. Currently I am writing high quality and seo friendly content about various mobiles and gadgets on Qntechhub.

WhatsApp Channel

Join Now

Telegram Channel

Join Now