Mobiles Gadgets Tablets Laptops TV Movies Automobile General

Lava Bold N1 Pro: ₹7000 ಬೆಲೆಯಲ್ಲಿ ಬಜೆಟ್ ಕಿಂಗ್ ಸ್ಮಾರ್ಟ್‌ಫೋನ್

Published On: May 30, 2025 4:11 pm
Lava Bold N1 Pro
Google News
Follow Us

Lava ಕಂಪನಿಯು 2025 ರಲ್ಲಿ ಭಾರತದಲ್ಲಿ ಎರಡು ಹೊಸ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅದು Lava Bold N1 ಮತ್ತು Lava Bold N1 Pro.ಈ ಫೋನ್‌ಗಳು ₹7,000 ಕ್ಕಿಂತ ಕಡಿಮೆ ದರದಲ್ಲಿ ಲಭ್ಯವಿದ್ದು, 5000mAh ಬ್ಯಾಟರಿ, ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿವೆ.  

ಈ ಲೇಖನದಲ್ಲಿ ನಾವು ಲಾವಾ ಬೋಲ್ಡ್ N1 ಮತ್ತು N1 Pro ಫೋನ್‌ಗಳ ವೈಶಿಷ್ಟ್ಯಗಳು, ಬೆಲೆ ಮತ್ತು ಲಭ್ಯತೆ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.

Lava Bold N1 ವಿಶೇಷಣಗಳು

41

ಡಿಸ್ಪ್ಲೇ ಮತ್ತು ವಿನ್ಯಾಸ

ಲಾವಾ ಬೋಲ್ಡ್ N1 ನಲ್ಲಿ 6.75 ಇಂಚಿನ HD+ ಡಿಸ್ಪ್ಲೇ ಇದೆ. 720 × 1600 ಪಿಕ್ಸೆಲ್ ರೆಸಲ್ಯೂಶನ್‌ ನ್ನು ಹೊಂದಿದ್ದು, ಫುಲ್ ವೀಕ್ಷಣಾ ಅನುಭವಕ್ಕಾಗಿ ಚಿಕ್ಕ ಫ್ರೇಮ್ಲೆಸ್ ವಿನ್ಯಾಸವನ್ನು ಹೊಂದಿದೆ. ಫೋನ್ ಹಗುರವಾಗಿದೆ ಮತ್ತು ಹ್ಯಾಂಡ್‌ಹೆಲ್ಡ್ ಅನುಭವ ಉತ್ತಮವಾಗಿದೆ.

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ

ಈ ಫೋನ್ ನಲ್ಲಿ UNISOC ಆಕ್ಟಾ-ಕೋರ್ ಚಿಪ್‌ಸೆಟ್ ಇದೆ, ಇದು ದಿನನಿತ್ಯದ ಉಪಯೋಗಕ್ಕೆ ಅನುಕೂಲಕರವಾಗಿದೆ. 4GB RAM ಹಾಗೂ 64GB ಇಂಟರ್ನಲ್ ಸ್ಟೋರೇಜ್ ಜೊತೆಗೆ ಬರುವುದರಿಂದ, ನೀವು ಸಂಗ್ರಹಣೆಯನ್ನು ಸುಲಭವಾಗಿ ನಡೆಸಬಹುದು. ಜೊತೆಗೆ ಈ ಸಾಧನವು Android 14 Go ಆವೃತ್ತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತದೆ. 

ಕ್ಯಾಮೆರಾ ಸಾಮರ್ಥ್ಯ

ಲಾವಾ ಬೋಲ್ಡ್ N1 ನಲ್ಲಿ 13MP AI ಡ್ಯುಯಲ್ ಕ್ಯಾಮೆರಾವನ್ನು ಒದಗಿಸಲಾಗಿದೆ. ಫೋನ್‌ನ ಮುಂಭಾಗದಲ್ಲಿ 5MP ಸೆಲ್ಫಿ ಕ್ಯಾಮೆರಾ ಇದೆ, ವಿಡಿಯೋ ಕಾಲ್ ಹಾಗೂ ಸೆಲ್ಫಿ ಕ್ಲಿಕ್ಕಿಸಲು ಉತ್ತಮವಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಇದು 5000mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದೆ. ಜೊತೆಗೆ 10W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. 

ಇತರೆ ವೈಶಿಷ್ಟ್ಯಗಳು

ಲಾವಾ ಬೋಲ್ಡ್ ಪೋನಿನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಫೇಸ್ ಅನ್‌ಲಾಕ್ ಮತ್ತು ಧೂಳು ಮತ್ತು ನೀರಿನ ಸ್ಪ್ಲಾಶ್‌ಗಳ ವಿರುದ್ಧ ರಕ್ಷಣೆ ನೀಡಲು IP54 ರೇಟಿಂಗ್ ಅನ್ನು ಹೊಂದಿದೆ. 

Lava Bold N1 Pro ವಿಶೇಷಣಗಳು

40

ಡಿಸ್ಪ್ಲೇ ಮತ್ತು ವಿನ್ಯಾಸ

Lava Bold N1 Pro ಕೂಡ 6.67 ಇಂಚಿನ HD+ ಪಂಚ್-ಹೋಲ್ ಡಿಸ್ಪ್ಲೇ ಹೊಂದಿದ್ದು, ಸ್ಪಷ್ಟತೆ ಮತ್ತು ಉಜ್ವಲತೆ ಉತ್ತಮವಾಗಿದೆ. 90Hz ರಿಫ್ರೆಶ್ ದರವು ಸುಗಮವಾದ ವೀಕ್ಷಣೆಯ ಅನುಭವ ನೀಡುತ್ತದೆ, ಗೇಮಿಂಗ್ ಮತ್ತು ಸ್ಕ್ರೋಲಿಂಗ್ ಗೆ ಉಪಯುಕ್ತ.

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ

ಈ ಲಾವಾ Bold ನಲ್ಲಿ UNISOC T606 ಆಕ್ಟಾ-ಕೋರ್  ಚಿಪ್‌ಸೆಟ್ ಇದೆ. 4GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿರುತ್ತದೆ. ಜೊತೆಗೆ ಇದನ್ನು 256GB ಸ್ಟೋರೇಜ್ ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ಸಾಮರ್ಥ್ಯ

ಲಾವಾ ಪ್ರೊ ಮಾದರಿಯಲ್ಲಿ 50MP AI ಟ್ರಿಪಲ್ ಕ್ಯಾಮೆರಾ ಅನ್ನು ಹೊಂದಿದೆ. ಮುಂಭಾಗಕ್ಕೆ 8MP ಸೆಲ್ಫಿ ಕ್ಯಾಮೆರಾ ಇರುತ್ತದೆ, ಇದು ಸ್ಪಷ್ಟವಾದ ಸೆಲ್ಫಿಗಳನ್ನು ಕ್ಲಿಕ್ ಮಾಡುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಲಾವಾ ಬೋಲ್ಡ್ N1 ಪ್ರೊ ಪೋನಿನಲ್ಲಿ 5000mAh ಬ್ಯಾಟರಿ ಅನ್ನು ಹೊಂದಿದ್ದು, ಇದು 18W ಚಾರ್ಜರ್‌ನ್ನು ಬೆಂಬಲಿಸುತ್ತದೆ.

ಇತರೆ ವೈಶಿಷ್ಟ್ಯಗಳು

ಲಾವಾ ಮೊಬೈಲ್ ಫೋನ್ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್ ಅನ್‌ಲಾಕ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Lava Bold N1 ಮತ್ತು Lava Bold N1 Pro: ಬೆಲೆ

ಲಾವಾ ಬೋಲ್ಡ್ N1 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ ರೂ. 5,999 ಆಗಿದ್ದರೆ, ಬೋಲ್ಡ್ N1 ಪ್ರೊ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ರೂ. 6,699 ಆಗಿದೆ. ಎರಡೂ ಫೋನ್‌ಗಳು ಅಮೆಜಾನ್ ನಲ್ಲಿ ಬರಲಿದೆ.

Lava Bold N1 ಜೂನ್ 4 ರಿಂದ ರೇಡಿಯಂಟ್ ಬ್ಲಾಕ್ ಮತ್ತು ಸ್ಪಾರ್ಕ್ಲಿಂಗ್ ಐವರಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹಾಗೆ Bold N1 Pro ಜೂನ್ 2 ರಿಂದ ಸ್ಟೆಲ್ತ್ ಬ್ಲಾಕ್ ಮತ್ತು ಟೈಟಾನಿಯಂ ಕಪ್ಪು ಛಾಯೆಗಳಲ್ಲಿ ಮಾರಾಟವಾಗಲಿದೆ. ಬೋಲ್ಡ್ N1 ಪ್ರೊ ಮೇಲೆ ಹೆಚ್ಚುವರಿ 100 ರೂ. ರಿಯಾಯಿತಿ ಪಡೆಯಲು ಗ್ರಾಹಕರು ಚೆಕ್ಔಟ್ ಸಮಯದಲ್ಲಿ ಕೂಪನ್ ಕೋಡ್ ಬಳಸಬಹುದು. 

Pallavi N

My name is Pallavi N. I am an experienced content writer. Currently I am writing high quality and seo friendly content about various mobiles and gadgets on Qntechhub.

WhatsApp Channel

Join Now

Telegram Channel

Join Now