Mobiles Gadgets Tablets Laptops TV Movies Automobile General

Tecno Pova Curve 5G ಫೋನ್ ಲಾಂಚ್ – ಫೀಚರ್ಸ್ ಮತ್ತು ಬೆಲೆ

Published On: May 29, 2025 7:53 pm
Tecno Pova Curve 5G
Google News
Follow Us

ಟೆಕ್ನೋ (TECNO) ತನ್ನ ನವೀನ 5G ಸ್ಮಾರ್ಟ್‌ಫೋನ್ Pova Curve 5G ಮೂಲಕ ಮಧ್ಯಮ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೊಸ ಪ್ರಬಲ ಸ್ಪರ್ಧೆಯನ್ನು ಸೃಷ್ಟಿಸಿದೆ. ಸ್ಟೈಲಿಶ್ ಕರ್ವ್ಡ್ ಡಿಸ್‌ಪ್ಲೇ, ಶಕ್ತಿಶಾಲಿ ಬ್ಯಾಟರಿ, ನವೀನ ಪ್ರೊಸೆಸರ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಇದು ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಲೇಖನದಲ್ಲಿ, ಟೆಕ್ನೋ ಪೋವಾ ಕರ್ವ್ (Tecno Pova Curve 5G) ಫೋನ್‌ನ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ತಿಳಿಯೋಣ.

Tecno Pova Curve 5G ಬೆಲೆ ಮತ್ತು ಲಭ್ಯತೆ

ಟೆಕ್ನೋ ಪೋವಾ ಕರ್ವ್ 5G (Tecno Pova Curve 5G) ಅನ್ನು ಭಾರತದಲ್ಲಿ 6GB + 128GB ಮಾದರಿಯ ಬೆಲೆ 15,999 ಮತ್ತು 8GB+128GB ಆವೃತ್ತಿಯ ಬೆಲೆ ರೂ. 16,999.  ಫೋನ್ ಜೂನ್ 5 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ. ಹಾಗೂ ಈ ಸ್ಮಾರ್ಟ್ಫೋನ್ ಮ್ಯಾಜಿಕ್ ಸಿಲ್ವರ್, ನಿಯಾನ್ ಸಿಯಾನ್ ಮತ್ತು ಗೀಕ್ ಬ್ಲಾಕ್ ಬಣ್ಣಗಳಲ್ಲಿ ಬರುತ್ತದೆ. 

ಪ್ರೀಮಿಯಂ ಲುಕ್‌ಗಾಗಿ ಕರ್ವ್ಡ್ ಡಿಸ್ಪ್ಲೇ

33

TECNO POVA Curve 5G ನ ಪ್ರಮುಖ ಆಕರ್ಷಣೆ ಅದರ 6.78 ಇಂಚ್ FHD+ AMOLED ಕರ್ವ್ಡ್ ಡಿಸ್‌ಪ್ಲೇ ಆಗಿದೆ. ಇದು 144Hz ರಿಫ್ರೆಶ್ ರೇಟ್ ನೀಡುವುದರಿಂದ ಸ್ಮೂತ್ ಸ್ಕ್ರೋಲಿಂಗ್ ಮತ್ತು ಉತ್ತಮ ಗೇಮಿಂಗ್ ಅನುಭವ ದೊರೆಯುತ್ತದೆ. 3D ಕರ್ವ್ಡ್ ಎಡ್ಜ್‌ಗಳು ಫೋನ್‌ಗೆ ಫ್ಲ್ಯಾಗ್‌ಶಿಪ್ ಫೀಲ್ ನೀಡುತ್ತವೆ. 

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ

ಟೆಕ್ನೋ ಈ ಫೋನ್‌ನಲ್ಲಿ ಮೀಡಿಯಾ ಟೆಕ್ ಡಿಮೆನ್ಸಿಟಿ 7300 ಚಿಪ್‌ಸೆಟ್ ಅನ್ನು ಬಳಸಿದೆ, ಇದನ್ನು 4nm ತಂತ್ರಜ್ಞಾನದಲ್ಲಿ ತಯಾರಾಗಿದ್ದು ಉತ್ತಮ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಮತ್ತು ಆಂಡ್ರಾಯ್ಡ್ 15 ಅಡಿಯಲ್ಲಿ HiOS 15 ನಲ್ಲಿ ಕೆಲಸ ನಿರ್ವಹಿಸುತ್ತದೆ. 

ಇದು ದೈನಂದಿನ ಬಳಕೆಯ ಎಲ್ಲ ಕಾರ್ಯಗಳಲ್ಲಿ ವೇಗವಾಗಿ ಪ್ರತಿಕ್ರಿಯೆ ನೀಡುತ್ತದೆ, ಗೇಮಿಂಗ್, ಮಲ್ಟಿ ಟಾಸ್ಕಿಂಗ್, ಫುಲ್ HD ಸ್ಟ್ರೀಮಿಂಗ್ ಎಲ್ಲವೂ ಲ್ಯಾಗ್ ಇಲ್ಲದೆ ಸಾಗುತ್ತದೆ.

ಕ್ಯಾಮೆರಾ ಸಾಮರ್ಥ್ಯ

ಟೆಕ್ನೋ ಪೋವಾ ಕರ್ವ್ 5G ಹಿಂಭಾಗದಲ್ಲಿ 64MP ಸೋನಿ IMX682 ಪ್ರೈಮರಿ ಕ್ಯಾಮೆರಾ ಹೊಂದಿದ್ದು, 2MP ಪೋರ್ಟ್ರೇಟ್ ಕ್ಯಾಮೆರಾವನ್ನು ಒದಗಿಸಲಾಗಿದೆ. ದಿನ ಮತ್ತು ರಾತ್ರಿ ಎರಡರಲ್ಲೂ ಉತ್ತಮ ಫೋಟೋಗಳನ್ನು ತೆಗೆದುಕೊಳ್ಳುತ್ತದೆ. ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮೆರಾ ಇದೆ, ಇದು ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಳಿಗೆ ಸೂಕ್ತವಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಟೆಕ್ನೋ ಈ ಫೋನ್‌ನಲ್ಲಿ 5500mAh ಬ್ಯಾಟರಿ ನೀಡಿದ್ದು, ಒಂದು ದಿನ ಪೂರ್ತಿಯಾಗಿ ಬ್ಯಾಟರಿ ಉಳಿಯುತ್ತದೆ. ಜೊತೆಗೆ 45W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ, ಇದು ಕೇವಲ 15-20 ನಿಮಿಷಗಳಲ್ಲಿ ಫೋನ್‌ನನ್ನು 50% ವರೆಗೆ ಚಾರ್ಜ್ ಮಾಡುತ್ತದೆ.

ಸಂಪರ್ಕ ಮತ್ತು ಇತರೆ ವೈಶಿಷ್ಟ್ಯಗಳು

ಟೆಕ್ನೋ ಪೋವಾ ಕರ್ವ್ 5G ನ ವಿಶೇಷತೆ ಎಂದರೆ ಇದು 5G  ಮತ್ತು Wi-Fi ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಬ್ಲೂಟೂತ್ 5.4, ಸ್ಟೀರಿಯೋ ಸ್ಪೀಕರ್ಸ್ ಮತ್ತು ಡಾಲ್ಬಿ ಅಟ್ಮೋಸ್ ಸ್ಪೀಕರ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯವನ್ನು ಹೊಂದಿರುತ್ತದೆ. 

Pallavi N

My name is Pallavi N. I am an experienced content writer. Currently I am writing high quality and seo friendly content about various mobiles and gadgets on Qntechhub.

WhatsApp Channel

Join Now

Telegram Channel

Join Now