Mobiles Gadgets Tablets Laptops TV Movies Automobile General

Realme Buds Air 7 Pro ವೈಶಿಷ್ಟ್ಯಗಳು ಮತ್ತು ಬೆಲೆ

Published On: May 28, 2025 9:00 pm
Realme Buds Air 7 Pro
Google News
Follow Us

ಇತ್ತೀಚೆಗೆ ಲಾಂಚ್ ಆದ Realme Buds Air 7 Pro ಅತ್ಯುತ್ತಮ ತಂತ್ರಜ್ಞಾನ ಮತ್ತು ಆಧುನಿಕ ವಿನ್ಯಾಸವನ್ನು ಹೊಂದಿದ್ದು, ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಆಗಿದೆ. ಈ ಬಡ್ಸ್‌ಗಳು ಶಬ್ದ ಗುಣಮಟ್ಟ, ಬ್ಯಾಟರಿ ಲೈಫ್, ಶಬ್ದ ರದ್ದತಿ (ANC), ಕಾನ್ಫರ್ಟ್, ಮತ್ತು ಹೊಸ ತಂತ್ರಜ್ಞಾನಗಳ ಸಂಯೋಜನೆಯೊಂದಿಗೆ ಬರುತ್ತವೆ.

ಈ ಲೇಖನದಲ್ಲಿ ನಾವು ರಿಯಲ್‌ಮಿ ಬಡ್ಸ್ ಏರ್ 7 ಪ್ರೊ (Realme Buds Air 7 Pro) ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

Realme Buds Air 7 Pro ವೈಶಿಷ್ಟ್ಯಗಳು 

21

ರಿಯಲ್‌ಮಿ ಬಡ್ಸ್ ಏರ್ 7 ಪ್ರೊ ಇಯರ್‌ಬಡ್ಸ್‌ಗಳಲ್ಲಿ 11mm ಮತ್ತು 6mm ಡ್ಯುಯಲ್ ಡೈನಾಮಿಕ್ ಡ್ರೈವರ್‌ಗಳು ಬಳಸಲಾಗಿದೆ. ಇವು Hi-Res Audio ಪ್ರಮಾಣೀಕರಣ ಹೊಂದಿದ್ದು, LHDC 5.0 ಆಡಿಯೋ ಕೋಡೆಕ್‌ಗಳನ್ನು ಬೆಂಬಲಿಸುತ್ತದೆ. 

ಈ ಇಯರ್‌ಬಡ್ಸ್‌ಗಳು ಎರ್ಕೋನಾಮಿಕ್ ವಿನ್ಯಾಸವನ್ನು ಹೊಂದಿದ್ದು, ದೀರ್ಘಕಾಲದ ಬಳಕೆಯಲ್ಲೂ ಸಂಗೀತ ಕೇಳಲು ಆರಾಮದಾಯಕವಾಗಿರುತ್ತವೆ. ಹಾಗೆ ಇದು IP55 ಪ್ರಮಾಣೀಕರಣ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸುತ್ತವೆ.

ಈ ಇಯರ್‌ಬಡ್ಸ್‌ಗಳಲ್ಲಿ 52dB (ANC) ತಂತ್ರಜ್ಞಾನವನ್ನು ಬಳಸಲಾಗಿದೆ, ಇದು ಹೊರಗಿನ ಶಬ್ದಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಜೊತೆಗೆ ಇದು ಸ್ಮಾರ್ಟ್ ಅಡಾಪ್ಟಿವ್ ANC ಅನ್ನು ಹೊಂದಿದೆ. 

ರಿಯಲ್‌ಮಿ Buds Air 7 Pro ಇಯರ್‌ಬಡ್ಸ್‌ಗಳಲ್ಲಿ ಆರು ಮೈಕ್ರೋಫೋನ್‌ಗಳ ವ್ಯವಸ್ಥೆ ಇದೆ, ಇದು ಕರೆ ಸಮಯದಲ್ಲಿ ಶಬ್ದ ರದ್ದತಿಯನ್ನು ಒದಗಿಸುತ್ತದೆ. ಇದು AI-ಆಧಾರಿತ ENC ತಂತ್ರಜ್ಞಾನವನ್ನು ಬಳಸುತ್ತದೆ, ಇದು ಕರೆಗಳ ಸಮಯದಲ್ಲಿ ಸ್ಪಷ್ಟ ಧ್ವನಿಯನ್ನು ಒದಗಿಸುತ್ತದೆ. 

ಈ ಇಯರ್‌ಬಡ್ಸ್‌ಗಳು 28 ಗಂಟೆಗಳ ಪ್ಲೇಬ್ಯಾಕ್ ಅನ್ನು ಒದಗಿಸುತ್ತವೆ, ಮತ್ತು ಚಾರ್ಜಿಂಗ್ ಕೇಸಿನೊಂದಿಗೆ ಒಟ್ಟು 48 ಗಂಟೆಗಳ ಬ್ಯಾಟರಿ ಲೈಫ್ ಲಭ್ಯವಿದೆ. 10 ನಿಮಿಷಗಳ ಚಾರ್ಜ್ ಮಾಡಿದ್ದರೆ 11 ಗಂಟೆಗಳವರೆಗೆ ಬಳಕೆಯನ್ನು ನೀಡುತ್ತದೆ. 

ರಿಯಲ್‌ಮಿ ಬಡ್ಸ್ ಏರ್ 7 ಪ್ರೊ (Realme Buds Air 7 Pro) ಇಯರ್‌ಬಡ್ಸ್‌ಗಳು Bluetooth 5.4 ತಂತ್ರಜ್ಞಾನವನ್ನು ಬಳಸುತ್ತವೆ, ಇದು ಸ್ಥಿರ ಮತ್ತು ವೇಗದ ಸಂಪರ್ಕವನ್ನು ಒದಗಿಸುತ್ತದೆ. ಗೇಮಿಂಗ್‌ಗಾಗಿ ಇವು 45ms ಕಡಿಮೆ ಲ್ಯಾಟೆನ್ಸಿ ಮೋಡ್ ಅನ್ನು ಬೆಂಬಲಿಸುತ್ತವೆ. 

ರಿಯಲ್‌ಮಿ Buds Air 7 Pro ಇಯರ್‌ಬಡ್ಸ್‌ಗಳು Realme Link ಆ್ಯಪ್ ಅನ್ನು ಬೆಂಬಲಿಸುತ್ತವೆ, ಇದು ಇಕ್ವಲೈಜರ್ ಸೆಟ್ಟಿಂಗ್‌ಗಳು, ANC ನಿಯಂತ್ರಣ, ಟಚ್ ಕಂಟ್ರೋಲ್‌ಗಳ ಕಸ್ಟಮೈಸೇಶನ್‌ ಮತ್ತು ಇತರ ವೈಶಿಷ್ಟ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. 

ಭಾರತದಲ್ಲಿ Realme Buds Air 7 Pro ಬೆಲೆ 

ರಿಯಲ್‌ಮಿ ಬಡ್ಸ್ ಏರ್ 7 ಪ್ರೊ ರೂ. 5,499 ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇದು ರೇಸಿಂಗ್ ಗ್ರೀನ್, ಮೆಟಾಲಿಕ್ ಗ್ರೇ, ಗ್ಲೋರಿ ಬೀಜ್ ಮತ್ತು ಫಿಯರಿ ರೆಡ್ ಬಣ್ಣಗಳಲ್ಲಿ ಬರುತ್ತದೆ. ಹಾಗೆ ಈ ಇಯರ್‌ಬಡ್ಸ್‌ಗಳನ್ನು ಮೇ 30 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ಇ-ಸ್ಟೋರ್, Amazon, Flipkart ಮತ್ತು ಆಯ್ದ ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಲು ಲಭ್ಯವಿರುತ್ತದೆ.

Pallavi N

My name is Pallavi N. I am an experienced content writer. Currently I am writing high quality and seo friendly content about various mobiles and gadgets on Qntechhub.

WhatsApp Channel

Join Now

Telegram Channel

Join Now